ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಬಂದ್ರೆ ಈ ಊರಿನ ಜನರ ಪಾಡು ಹೇಳೋರಿಲ್ಲ ಕೇಳೋರಿಲ್ಲ

ಚಿಕ್ಕಮಗಳೂರು : ರಸ್ತೆಯಲ್ಲಿ ಹರಿಯುತ್ತಿರೋ ನೀರು, ಮಳೆ ನಿಂತ ಮೇಲೆ ಕೆಸರು ಮಯ ರಸ್ತೆ, ಮನೆ ಅಂಗಳದಲ್ಲೂ ಕೆಸರು, ರಸ್ತೆ ಇದ್ದರು ಜನ್ರ ಪರದಾಟ.

ಹೌದು ಇದು ಕಾಫಿ ನಾಡು ಚಿಕ್ಕಮಗಳೂರಿನ ಕಳಸ ತಾಲೂಕಿನ ಗಣಪತಿ ಕಟ್ಟೆ,ಕುಂಬಾರ ಕೆರೆ ಗ್ರಾಮದ ಜನ್ರ ಗೋಳು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಹಲವು ವರ್ಷಗಳಿಂದಲೂ ಇದೇ ಸಮಸ್ಯೆಯಿಂದ ಜನ ಪರದಾಡ್ತಿದ್ದಾರೆ.

ಮಳೆಗಾಲ ಮುಗಿತು ಇನ್ನೂ ಮುಂದಿನ ಮಳೆಗಾಲದಲ್ಲಾದ್ರು ಸಮಸ್ಯೆ ಬಗೆಹರಿಯುತ್ತೋ ನೋಡೋಣ ಅಂದು ಕೊಂಡಿದ್ರೆ ಈ ವರ್ಷ ಮಳೆ ನಿಲ್ಲುವ ಲಕ್ಷಣ ಕಾಣಿಸ್ತಾ ಇಲ್ಲ. ಮಳೆ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ನಮ್ಮ ಗೋಳು ಕೇಳುವವರಿಲ್ಲ ಇದರಿಂದ ತುಂಬಾ ಸಮಸ್ಯೆ ಆಗ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸುವುದು ಹೀಗೆ.

ಇಂತಹ ದುಸ್ಥಿತಿಗೆ ಕಳಸ ತಾಲೂಕು ಅಡಳಿತ ಹಾಗೂ ಮಾವಿನಕೆರೆ ಗ್ರಾಮ ಪಂಚಾಯ್ತಿಯೇ ನೇರ ಹೊಣೆ ಅಂತಿದ್ದಾರೆ ಸ್ಥಳೀಯರು. ಮಾವಿನ ಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ಗಣಪತಿ ಕಟ್ಟೆ, ಕುಂಬಾರಕೆರೆ ಗ್ರಾಮಗಳಲ್ಲಿ ರಸ್ತೆ ಬದಿ ಚರಂಡಿಯೇ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಇವ್ರಿಗೆ ಹಳ್ಳ ಯಾವುದೋ ರಸ್ತೆಯಾವುದೋ ಒಂದು ಗೊತ್ತಾಗೋದಿಲ್ಲ. ಇನ್ನೂ ಇಲ್ಲಿ ಮುರಾರ್ಜಿ ಶಾಲೆಯು ಇದ್ದು, ವಿದ್ಯಾರ್ಥಿಗಳಿಗೂ ಸಮಸ್ಯೆ ಆಗ್ತಿದೆ ಎಂದು ಗ್ರಾಮಸ್ಥರು ಹೇಳೋದು ಹೀಗೆ.

ಒಟ್ಟಾರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಮಳೆಗಾಲದಲ್ಲಂತೂ ಜನ್ರು ಈ ರಸ್ತೆಯಲ್ಲಿ ಓಡಾಡೋಕೆ ಹಿಂದೇಟು ಹಾಕುವಂತಾಗಿದೆ.

ಡ್ಯಾನಿ ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Vinayak Patil
PublicNext

PublicNext

14/10/2024 05:46 pm

Cinque Terre

20.74 K

Cinque Terre

0