ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಮುರುಘಾ ಮಠದಲ್ಲಿ ನೋಡುಗರ ಕಣ್ಮನ ಸೆಳೆದ ಶ್ವಾನ ಪ್ರದರ್ಶನ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಜಗದ್ಗುರುಗಳ 150ನೇ ಜಯಂತಿ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಮುರುಘಾ ಮಠದ ಆವರಣದಲ್ಲಿ ಹಮ್ಮಿಕೊಂಡ ಈ ಶ್ವಾನ ಪ್ರದರ್ಶನದಲ್ಲಿ ದೇಶ- ವಿದೇಶ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಶ್ವಾನ ಪ್ರಿಯರು ತಮ್ಮ ಶ್ವಾನಗಳೊಂದಿಗೆ ಭಾಗಿಯಾಗಿದ್ರು. ದೇಶ- ವಿದೇಶ ತಳಿಯ ಸುಮಾರು 15ಕ್ಕೂ ಹೆಚ್ಚು ತಳಿಯ ಶ್ವಾನಗಳು ಪ್ರದರ್ಶನ ನೀಡಿದವು.

ಈ ವೇಳೆ ಕರ್ನಾಟಕದಲ್ಲಿ ಜನಜನಿತ ದೇಶದ ಸೇನೆಯಲ್ಲಿ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನ ಎಲ್ಲರ‌ ಆಕರ್ಷಣೆಯಾಗಿತ್ತು. ನೀಳ ದೇಹದ ವೇಗದ ಓಟದ ವಿಶೇಷ ದೇಹ ರಚನೆಯಿಂದಲೇ ಗುರುತಿಸಲ್ಪಡುವ ಮುಧೋಳ ಶ್ವಾನ ಜನಾಕರ್ಷಣೆ ಪಡೆಯಿತು. ಶ್ವಾನ ಸಾಕಾಣಿಕೆ‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜೇತರಿಗೆ ಪ್ರಶಸ್ತಿ ಫಲಕ ನೀಡಲಾಯಿತು.

Edited By : Ashok M
PublicNext

PublicNext

13/10/2024 07:18 pm

Cinque Terre

29.88 K

Cinque Terre

0

ಸಂಬಂಧಿತ ಸುದ್ದಿ