ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಕತ್ತಾದಲ್ಲಿ ಏರ್‌ಬಸ್ ಬೆಲುಗಾ ವಿಮಾನ "ತಾಂತ್ರಿಕ ನಿಲುಗಡೆ", ಇತಿಹಾಸ ನಿರ್ಮಿಸಿದ ಏರ್ಪೋಟ್

ಅತಿದೊಡ್ಡ ಏರ್‌ಬಸ್ ಬೆಲುಗಾ ಎಕ್ಸ್‌ಎಲ್ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದು,ಮೊದಲ ಬಾರಿಗೆ ಕೊಲ್ಕತ್ತಾ ನಿಲ್ದಾಣವು ಇಷ್ಟು ದೊಡ್ಡ ಬಸ್‌ ಅನ್ನು ನೋಡಿದೆ.ವಿಮಾನವು ಫ್ರಾನ್ಸ್‌ನ ಟೌಲೌಸ್ ಏರ್‌ಬಸ್ ಫ್ಯಾಕ್ಟರಿಯಿಂದ ಹಾರಾಟ ಆರಂಭಿಸಿ ಚೀನಾದ ಟಿಯಾಂಜಿನ್ ಮೂಲದ ಮತ್ತೊಂದು ಘಟಕಕ್ಕೆ ಉಪಕರಣಗಳನ್ನು ಸಾಗಿಸುತ್ತಿದೆ ಎಂದು ಹೇಳಲಾಗುತ್ತಿದೆ. ಬೃಹತ್ ವಿಮಾನವು ರಾತ್ರಿ 10.43ಕ್ಕೆ ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭಿಸಿ ಕೊಲ್ಕತ್ತಾ ಬಂದಿಳಿಯಿತು.ಈ ವಿಮಾನದ ಗಾತ್ರ ತುಂಬಾನೇ ದೊಡ್ಡದಾಗಿರುವುದರಿಂದ ಭಾರತದ ಕೋಲ್ಕತ್ತಾ ವಿಮಾನ ನಿಲ್ದಾಣವು "ತಾಂತ್ರಿಕ ನಿಲುಗಡೆ" ಸೂಕ್ತ ಸ್ಥಳವಾಗಿದೆ.ಚೀನಾಕ್ಕೆ ಹೊರಡುವ ಮೊದಲು ವಿಮಾನಕ್ಕೆ ಇಂಧನ ಫಿಲ್ ‌ಕೂಡ ಮಾಡಲಾಗಿತ್ತು.ಈ ವಿಮಾನ ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ತಲುಪಲು ಸುಮಾರು 5 ಗಂಟೆ 28 ನಿಮಿಷಗಳನ್ನು ತೆಗೆದುಕೊಂಡಿತು.

Edited By : Suman K
PublicNext

PublicNext

10/10/2024 08:27 pm

Cinque Terre

24.46 K

Cinque Terre

1

ಸಂಬಂಧಿತ ಸುದ್ದಿ