ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರೆಯಾಯ್ತು ಅಪ್ಪಟ ದೇಶಾಭಿಮಾನದ ಮಾಣಿಕ್ಯ : ತಂದೆ-ತಾಯಿ ಬದುಕಿದ್ದರೂ ಅನಾಥಾಶ್ರಮ ಸೇರಿದ್ರು ರತನ್ ಟಾಟಾ!

ಭಾರತ ಕಂಡ ಶ್ರೇಷ್ಟ ಕೈಗಾರಿಕೋದ್ಯಮಿ, ಉದ್ಯಮ ಲೋಕದ ಧ್ರುವತಾರೆ, ಕಲಿಯುಗದ ಕರ್ಣ ಅಂತಾನೇ ಕರೆಸಿಕೊಳ್ಳುತ್ತಿದ್ದ ರತನ್ ಟಾಟಾ ಅವರು ನಮ್ಮನ್ನು ಅಲಿದ್ದಾರೆ. ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ದೇಶಕ್ಕೆ ಸಂಕಷ್ಟ ಎದುರಾದರೆ ಸಾಕು ರತನ್ ಜೀ ನೀಡಿದ ಧನ-ಮನ ಸಹಾಯ ಅವಿಸ್ಮರಣೀಯ. ಅವರಲ್ಲಿದ್ದ ಹೃದಯ ಶ್ರೀಮಂತಿಕೆ, ಮಾನವೀಯತೆಯ ವ್ಯಕ್ತಿತ್ವ ಬೇರೆ ಯಾರಲ್ಲೂ ಕಾಣಸಿಗದು. ಈ ಸದ್ಗುಣಗಳ ಹಿಂದೆ ಅತ್ಯಂತ ನೋವುಗಳ ಸರಮಾಲೆಯೇ ಇದೆ.

ತಂದೆ-ತಾಯಿ ಬದುಕಿದ್ದರೂ, ಶ್ರೀಮಂತಿಕೆಯಿದ್ದರೂ ಅನಾಥಾಶ್ರಮದಲ್ಲಿ ಬೆಳೆದಿದ್ದರು ರತನ್ ಟಾಟಾ!

ಹೌದು. ನಾವಲ್ ಟಾಟಾ ಹಾಗೂ ಸೂನಿ ಟಾಟಾ ದಂಪತಿಯ ಮಗನಾಗಿ ರತನ್ ಟಾಟಾ ಅವರು 1937ರ ಡಿಸೆಂಬರ್ 28ರಂದು ಮುಂಬೈನಲ್ಲಿ ಜನಿಸಿದರು. ಆದರೆ ಅವರು 10 ವರ್ಷ ವಯಸ್ಸಿನವರಾಗಿದ್ದಾಗಲೇ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡು ದೂರಾದರು. ಆಗ, ಮಗುವನ್ನು ಯಾರು ನೋಡಿಕೊಳ್ಳಬೇಕು ಎಂಬ ಪ್ರಶ್ನೆ ಎದ್ದಿದಾಗ ಈ ತಂದೆ ತಾಯಿ ಅವರನ್ನು ಟಾಟಾ ಫ್ಯಾಮಿಲಿಯದ್ದೇ ಆದ ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು.

ಇದನ್ನು ತಿಳಿದ ರತನ್ ಟಾಟಾ ಅವರ ಅಜ್ಜಿ, ನವಾಜ್ ಬಾಯಿ ಟಾಟಾ ಅವರು ರತನ್ ಟಾಟಾ ಅವರನ್ನು ಕಾನೂನಾತ್ಮಕವಾಗಿ ದತ್ತು ಪಡೆದರು. ಅಷ್ಟರಲ್ಲಾಗಲೇ ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಅವರು ಬೇರೊಂದು ಮದುವೆಯಾಗಿದ್ದರಲ್ಲದೆ, ಅವರಿಗೆ ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಹಾಗಾಗಿ, ಅನಾಥಾಲಯದಿಂದ ತನ್ನ ತಂದೆ, ತಾತ ಇದ್ದ ಮನೆಗೆ ಹಿಂದಿರುಗಿದ ರತನ್ ಟಾಟಾ, ಅಲ್ಲಿ ತಮ್ಮ ಮಲಸಹೋದರ ನೋಯೆಲ್ ಟಾಟಾ (ರತನ್ ಟಾಟಾ ಅವರ ಮಲತಾಯಿ ಮಗ) ಅವರೊಂದಿಗೆ ಬೆಳೆದರು.

ರತನ್‌ ಟಾಟಾ ಅವರು 1991ರಲ್ಲಿ ತಮ್ಮ ಮುತ್ತಜ್ಜ ಜಮ್ಶೆಡ್‌ಜೀ ಟಾಟಾ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯನ್ನು ಅವರು 2012ರವರೆಗೆ ಸಮರ್ಥವಾಗಿ ಮುನ್ನಡೆಸಿದ್ದರು.

ಮಹಾಭಾರತದಲ್ಲಿ ಬ್ರಹ್ಮಚಾರಿ ಭೀಷ್ಮ ಶ್ರೇಷ್ಠರು, ಧರ್ಮ ರಕ್ಷಕರನ್ನು ಅಧಿಕಾರಕ್ಕೆ ತರಲು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡಿದ್ರು. ಇದಕ್ಕೆ ರತನ್ ಜೀ ಹೊರತೆನಲ್ಲ. ಭಾರತದ ಭವ್ಯ ಭವಿಷ್ಯಕ್ಕಾಗಿ ಸದಾ ದುಡಿದರು. ಕೊರೊನಾ ಸಂಕಷ್ಟದ ಕಾಲದಲ್ಲೂ ತಮ್ಮ ಉದ್ಯೋಗಿಗಳಿಗೆ ಉದ್ಯೋಗದ ಭದ್ರತೆ ನೀಡಿದರು. ಅಂತಹ ಧೀಮಂತ ವ್ಯಕ್ತಿಗೆ ನಮ್ಮದೊಂದು ನುಡಿನಮನ ಇರಲಿ.

ವಿಜಯಕುಮಾರ ಗಾಣಿಗೇರ, ನ್ಯೂಸ್ ಡೆಸ್ಕ್, ಪಬ್ಲಿಕ್ ನೆಕ್ಸ್ಟ್

Edited By : Suman K
PublicNext

PublicNext

10/10/2024 07:24 pm

Cinque Terre

34.36 K

Cinque Terre

4

ಸಂಬಂಧಿತ ಸುದ್ದಿ