ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಅಮೂಲ್ಯ "ರತನ್'' ಇನ್ನು ನೆನಪು ಮಾತ್ರ

ವಿಶ್ಲೇಷಣೆ : ಕೇಶವ ನಾಡಕರ್ಣಿ, ಪ್ರಧಾನ ಸಂಪಾದಕರು ಪಬ್ಲಿಕ್ ನೆಕ್ಸ್ಟ

ದೂರದೃಷ್ಟಿಯ ಉದ್ಯಮಿ, ಮಾನವೀಯ ತುಡಿತದ ಸಂಯಮಿ, ಭಾರತದ ಅಮೂಲ್ಯ ರತ್ನ ರತನ್ ಟಾಟಾ ಇನ್ನಿಲ್ಲ ಅಂತ ಹೇಳೋಕೆ ದೇಶದ ಆತ್ಮ ಏಕೋ ಒಪ್ಪುತ್ತಿಲ್ಲ.

ರತನ್ ಟಾಟಾ ವರ್ಣಾತೀತ ವ್ಯಕ್ತಿ. ದೇಶದ ಉದ್ಯಮ ರಂಗದ ಈ ಸಾಮ್ರಾಟ ಕೇವಲ ಕನಸುಗಾರನಾಗಿರಲಿಲ್ಲ, ಯುವ ಮನಗಳ ಕನಸುಗಳನ್ನು ಸಾಕಾರಗೊಳಿಸಿದ ಧೀಮಂತ.

ಉದ್ಯಮ ರಂಗದ ಈ ಸಾಮ್ರಾಟ ಆರಂಭಿಸದೇ ಇರುವ ಉದ್ಯಮಗಳಿಲ್ಲ. ಟಾಟಾ ಸ್ಟೀಲ್ಸ್ , ಟಾಟಾ ಮೋಟರ್ಸ್ , ಪಾವರ್ . ಕನ್ಸಲ್ಟನ್ಸಿ,ಟೆಕ್ನಾಲಜಿ, ಹೊಟೇಲ್ , ಟಿ ಹೀಗೆ ಹಲಾವರು ಉದ್ದಿಮೆಗಳನ್ನು ಪ್ರಾರಂಭಿಸಿ ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.

ಟಾಟಾ ಉದ್ಯಮಗಳು ವಿಶ್ವದ 50 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿರುವುದು ಇವರ ಸಾಧನೆಗೆ ಸಾಕ್ಷಿ. ಈ ಸಾಧನೆ ಹಿಂದೆ ರತನ್ ಟಾಟಾ ಅವರ ಶ್ರಮವಿದೆ ಎಂಬುದನ್ನು ಅಲ್ಲಗೆಳೆಯಲಾಗದು.

ಲಾಭದಲ್ಲಿರುವ ಕಂಪನಿ ಅಥವಾ ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಉದ್ಯಮಿಗಳು ಸಾಕಷ್ಟಿದ್ದಾರೆ.ಆದ್ರೆ ಹಾನಿಯಲ್ಲಿರುವ ಸಂಸ್ಥೆಗಳನ್ನು ತೆಗೆದುಕೊಂಡು ಯಶಸ್ವಿಯಾಗುವ ಸಾಹಸಿ ಅಂದ್ರೆ ರತನ್ ಟಾಟಾ ಒಬ್ಬರೇ ಅಂತ ಹೇಳಬಹುದು.

ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಎರಡು ವರ್ಷಗಳ ಹಿಂದೆ ಹಾನಿ ಹಾಗೂ ಸಾಲದಲ್ಲಿ ಮುಳುಗಿದ್ದ ನಮ್ಮ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ವಶಕ್ಕೆ ಪಡೆದು ಮುನ್ನಡೆಸುತ್ತಿರುವುದು.

ಇವರ ತಾತಾ JRD ಟಾಟಾ, 1932 ರಲ್ಲಿ ಪ್ರಾರಂಭಿಸಿದ್ದ ಟಾಟಾ ಏರ್ ಲೈನ್ಸ್ ಖಾಸಗಿ ವಿಮಾನಯಾನ ಸಂಸ್ಥೆಯನ್ನು ಅಂದಿನ ಭಾರತ ಸರಕಾರ 1962 ರಲ್ಲಿ ರಾಷ್ಟ್ರೀಕರಣಗೊಳಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಸರಕಾರ ವಶಪಡಿಸಿಕೊಂಡಾಗಿನಿಂದ 2022 ರವರೆಗೂ ಹಾನಿ ಅನುಭವಿಸಿ ಮುಚ್ಚುವ ಸ್ಥಿತಿಗೆ ಬಂದಿತ್ತು. 2022 ಅದನ್ನು ಸ್ವಾಧೀನಪಡಿಸಿಕೊಂಡ ರತನ್ ಟಾಟಾ ಮತ್ತೇ ಅದನ್ನು ಉತ್ತಮ ಸ್ಥಿತಿಗೆ ತರಲು ಶ್ರಮಿಸಿದ್ದು ಗಮನಾರ್ಹ.

ರತನ್ ಟಾಟಾ ಹೆಸರಾಂತ ಕೈಗಾರಿಕೋದ್ಯಮಿ ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಇವರು ಒಂದು ರೀತಿ ಅಜಾತ ಶತ್ರು ಎಂದು ಹೇಳಬಹುದು ಏಕೆಂದರೆ, ಉದ್ಯಮಿ ಎಂದರೆ, ಪೈಪೋಟಿ, ದ್ವೇಷ ಎಲ್ಲವೂಇದ್ದೇ ಇರುತ್ತವೆ.

ಆದರೆ ರತನ್ ಟಾಟಾ ಅವರಿಗೆ ಮಾತ್ರ ಜಗತ್ತಿನಲ್ಲಿ ಒಬ್ಬನೇ ಒಬ್ಬ ವಿರೋಧಿಯೂ ಇರಲಿಲ್ಲ . ಪ್ರಪಂಚದಾದ್ಯಂತ ಅನೇಕ ಜನರು ಅವರನ್ನು ಮೆಚ್ಚಲು ಕಾರಣ ಅವರ ಮಾನವೀಯ ಕೆಲಸಗಳು.

ಪ್ರತಿಯೊಂದು ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರೂ, ರತನ್ ಟಾಟಾ ಅವರ ಸಮಾಜ ಸೇವೆಗೆ ಸರಿಸಾಟಿ ಯಾವುದೂಇರಲಿಲ್ಲ . ರತನ್ ಟಾಟಾ ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದಲೇ ಅವರು ದೇಶದ ನಿಜವಾದ 'ಹೀರೋ' ಅನಿಸಿಕೊಂಡಿದ್ದರು.

ಕೊರೊನಾ ಸಮಯದಲ್ಲಿ ದೇಶದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿತ್ತಿತ್ತು. ಆಗ ರತನ್ ಟಾಟಾ, ಕೊರೊನಾದಿಂದಾಗಿ ನೌಕರರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ ಅವರನ್ನು ಕೆಲಸದಿಂದ ವಜಾ ಮಾಡಬೇಡಿ ಅಂತ ಕಂಪನಿ ಮಾಲಿಕರಲ್ಲಿ ಕೋರಿದ್ದು, ಅವರ ಮಾನವೀಯತೆಗೆ ಸಾಕ್ಷಿ ಅಗಿತ್ತು.

ಇಷ್ಟು ಮಾತ್ರವಲ್ಲ ತಮ್ಮ ಉದ್ಯೋಗಿಗಳಿಗೆ ಟಾಟಾ ಟ್ರಸ್ಟ್ನಿಂದ ೫೦೦ ಕೋಟಿ ರೂ. ದೇಣಿಗೆ ನೀಡಿದ್ದ ರು. ಕೊರೊನಾ ವ್ಯಾಕ್ಸಿನ್ ತಯಾರಿಕೆಗೆ ಸಹ ನೆರವಾಗಿದ್ದರು.

ರತನ್ ಟಾಟಾ ಒಂದು ರೀತಿಯಲ್ಲಿ ಛಲಂದಕ ಮಲ್ಲ ಕೂಡ ಆಗಿದ್ದರು. ಅವಮಾನವನ್ನು ಅವಕಾಶವನ್ನಾಗಿ ಮಾಡಿಕೊಳ್ಳುವದರಲ್ಲಿ ಅವರು ನಿಸ್ಸೀಮ.

1999 ರಲ್ಲಿ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿ. ರತನ್ ಟಾಟಾ ಆರಂಭಿಸಿದ್ದ ಪ್ಯಾಸಿಂಜರ್ ಕಾರ್ ಉದ್ಯಮ ಫೇಲ್ ಆಗಿತ್ತು. ಆಗ ಅದನ್ನು ಪ್ರತಿಷ್ಠಿತಿ ಫೋರ್ಡ್ ಕಂಪನಿಗೆ ಮಾರಲು ಮುಂದಾದರು.

ಮಾರಾಟದ ಚರ್ಚೆ ಸಮಯದಲ್ಲಿ ಫೋರ್ಡ್ ಕಂಪನಿ ಅಧಿಕಾರಿಗಳು ಆಡಿದ ಮಾತು ಹಾಗೂ ಮಾಡಿದ ಅವಮಾನ, ಟಾಟಾ ಅವರನ್ನು ಪುಟಿದೇಳುವಂತೆ ಮಾಡಿತು.

" ಟಾಟಾ ಅವ್ರೆ ನಿಮಗೆ ಸಾಧ್ಯವಿಲ್ಲದಿದ್ದಾಗ ನೀವೇಕೆ ಪ್ಯಾಸಿಂಜರ್ ಕಾರ್ ಉದ್ಯಮ ಆರಂಭಿಸಿದಿರಿ? ನಮಗೆ ನಿಮ್ಮ ಕಂಪನಿ ಅಗತ್ಯವಿಲ್ಲ, ಆದ್ರೂ ನಿಮಗೆ ಸಹಾಯ ಮಾಡಲು ನಾವು ಖರೀದಿಸುತ್ತಿದ್ದೇವೆ'' ಅಂತ ಫೋರ್ಡ್ ಅಧಿಕಾರಿಗಳು ಆಡಿದ ಮಾತುಗಳು ಟಾಟಾ ಅವರ ಮನಸ್ಸು ಘಾಸಿಗೊಳಿಸಿತ್ತು.

ಅವರಿಗೆ ಮಾರುತ್ತರ ನೀಡದೆ ವಾಪಸ್ ಬಂದ ಟಾಟಾ ಅವರು, ಅವಮಾನವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾದರು. ಅವರ ನಿರಂತರ ಪರಿಶ್ರಮ, ಟಾಟಾ ಸಮೂಹ ಸಂಸ್ಥೆಗಳ ಸಿಬ್ಬಂದಿಯ ಸಹಕಾರದಿಂದ ಟಾಟಾ ಮೋಟರ್ಸ್ ಸಂಸ್ಥೆ ಇಂದು ವಿಶ್ವದಾದ್ಯಂತ ಟಾಟಾ ಬ್ರ್ಯಾಂಡ್ ಆಗಿ ಬೆಳದು ನಿಂತಿದೆ.

ರತನ್ ಟಾಟಾ, ತಮ್ಮ ಸಂಸ್ಥೆ ಸಿಬ್ಬಂದಿಯನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. 2008 ನವೆಂಬರ್ 26 ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಯ್ತು.

ಅಂದು ಮುಂಬೈಯಲ್ಲಿ ನಡೆದ ಭಯೋತ್ದಪಾದಕ ದಾಳಿಯಲ್ಲಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ 300 ಅಮಾಯಕರು ಬಲಿಯಾಗಿದ್ದರು. ಆಗ ಮುಂಬೈದಲ್ಲಿರುವ ತಾಜ್ ಹೊಟೇಲ್ ಸಹ ಭಯೋತ್ಪಾದಕರು ಅಟ್ಟಹಾಸಕ್ಕೆ ಬಲಿಯಾಗಿತ್ತು.

ಹೊಟೇಲ್ ಗ್ರಾಹಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದ ರತನ್ ಟಾಟಾ, ಅಲ್ಲಿಯ ತಮ್ಮ ಸಿಬ್ಬಂದಿಯ 80 ಕುಟುಂಬಗಳ ನೆರವಿಗೆ ಸಹ ಧಾವಿಸಿದ್ದರು. ಇದು ಅವರ ಮಾನವೀಯತೆಯ ಇನ್ನೊಂದು ಮುಖವಾಗಿತ್ತು.

ಸರಳತೆಯ ಸಾಕಾರ ಮೂರ್ತಿಯಾಗಿದ್ದ ರತನ್ ಟಾಟಾ ಯಾವಾಗಲೂ ತಮ್ಮ ಚಾಲಕನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಕೆಲವು ಬಾರಿ ಚಾಲಕನನ್ನು ಹಿಂಬದಿ ಸೀಟ್ ದಲ್ಲಿ ಕೂಡ್ರಿಸಿ ತಾವೇ ಕಾರು ಚಾಲನೆ ಮಾಡುತ್ತಿದ್ದರಂತೆ. ಇದು ಅವರ ಡ್ರೈವರನಿಂದ ಹಿಡಿದು ಪ್ರ ತಿಯೊಬ್ಬ ಉದ್ಯೋಗಿಯನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂಬುದಕ್ಕೆ ಸಾಕ್ಷಿ ಅಗಿತ್ತು.

ಜಗತ್ತಿಗೆ ಟಾಟಾ ನ್ಯಾನೋ ಎಂಬ ಅಗ್ಗದ ಕಾರು ನೀಡಿದ ಖ್ಯಾತಿ ರತನ್ ಟಾಟಾ ಅವರದ್ದು. ಇದೇ ಸಮಯದಲ್ಲಿ ಟಾಟಾ ಮೋಟರ್ಸ್ ಕಂಪನಿಯು ದುಬಾರಿ ಕಾರುಗಳ ಮಾರುಕಟ್ಟೆಯಲ್ಲೂ ಸಾಕಷ್ಟು ಸಾಧನೆ ಮಾಡಿವೆ. ರೇಂಜ್ ರೋವರ್ ಮತ್ತು ಜಾಗ್ವಾರ್ ಎಫ್ ಮಾದರಿಯ ಕಾರುಗಳನ್ನು ನೀಡಿದ್ದ ಜಾಗ್ವಾರ್, ಲ್ಯಾಂಡ್ ರೋವರ್ ಅನ್ನು ಟಾಟಾ ಮೋಟರ್ಸ್ ಸ್ವಾಧೀನಪಡಿಸಿಕೊಂಡದ್ದು ಜಗತ್ತಿನ ಗಮನ ಸೆಳೆಯಿತು.

ಟಾಟಾ ಮೋಟರ್ಸ್ ಮಾರಾಟದ ಸಮಯದಲ್ಲಿ ತಮಗೆ ಅವಮಾನ ಮಾಡಿದ ಪ್ರತಿಷ್ಠಿತ ಫೋರ್ಡ್ ಕಂಪನಿಯ ಪ್ರಮುಖ ಅಂಗಸಂಸ್ಥೆಯನ್ನೇ ರತನ್ ಟಾಟಾ ಸ್ವಾಧೀನ ಪಡಿಸಿಕೊಂಡಿದ್ದಾರೆ ಅಂದ್ರೆ ಸಾಮಾನ್ಯವಲ್ಲ. ಅವಮಾನಗಳಾದಾಗ ಕುಗ್ಗದೆ ಹೇಗೆ ಯಶಸ್ಸಿನತ್ತ ನಡೆಯಬೇಕು ಎನ್ನುವ ಸ್ಫೂರ್ತಿದಾಯಕ ಪಾಠವನ್ನು ದಿವಂಗತ ರತನ್ ಟಾಟಾ ಬಿಟ್ಟು ಹೋಗಿದ್ದಾರೆ.

ಈ ಬಿಲಿಯನೇರ್ ಉದ್ಯಮಿ ದೇಣಿಗೆಗಳನ್ನು ನೀಡಲು ಹೆಸರುವಾಸಿಯಾಗಿದ್ದ ರು. ರತನ್ ಟಾಟಾ ಅವರಿಗೆ ೨೦೦೦ ರಲ್ಲಿ ಪ್ರತಿಷ್ಠಿ ತ ಪದ್ಮಭೂಷಣ ಮತ್ತು ೨೦೦೮ ರಲ್ಲಿ ಪದ್ಮ ವಿಭೂಷಣ ಪ್ರ ಶಸ್ತಿಯನ್ನು ನೀಡಲಾಗಿತ್ತು . ನಮ್ರತೆ ಮತ್ತು ಸಮಾಜಮುಖಿ ಕಾರ್ಯಗಳಿಂದ ರತನ್ ಟಾಟಾ ಎಲ್ಲರ ಹೃದಯವನ್ನು ಗೆದ್ದಿದ್ದರು.

Edited By : Suman K
PublicNext

PublicNext

10/10/2024 06:08 pm

Cinque Terre

31.77 K

Cinque Terre

3

ಸಂಬಂಧಿತ ಸುದ್ದಿ