ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕೊಟ್ಟ ಮಾತಿನಂತೆ ನಡೆದುಕೊಂಡ ಕೆ.ಎಲ್.ರಾಹುಲ್ : ವಿದ್ಯಾರ್ಥಿಗೆ ಎರಡನೇ ವರ್ಷದ ಶುಲ್ಕ ಪಾವತಿ..!

ಹುಬ್ಬಳ್ಳಿ : ಕೊಟ್ಟ ಮಾತಿಗೆ ತಪ್ಪಲಾರದೇ, ಸುಳ್ಳು ಭರವಸೆ ನೀಡದೇ ಓಡಲಾರೇ ಎಂಬುವಂತ ನಿದರ್ಶನಕ್ಕೆ ಸಾಕ್ಷಿ ಎಂಬುವಂತೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ನಡೆದುಕೊಂಡಿದ್ದು, ಮತ್ತೊಮ್ಮೆ ವಿದ್ಯಾರ್ಥಿ ಬಾಳಿಗೆ ಬೆಳಕಾಗಿದ್ದಾರೆ. ಹುಬ್ಬಳ್ಳಿಯ ಯುವ ಮುಖಂಡ ಮಂಜುನಾಥ ಹೆಬಸೂರ ಮೂಲಕ ಬಿವ್ಹಿಬಿ ಕಾಲೇಜಿನ ವಿದ್ಯಾರ್ಥಿಯ ಕಾಲೇಜಿನ ಫೀಸ್ ತುಂಬಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ವಿದ್ಯಾರ್ಥಿ ಅಮೃತ ಮಾವಿನಕಟ್ಟಿ ಎಂಬುವವರಿಗೆ ಕಳೆದ ವರ್ಷ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನಲ್ಲಿ ಬಿಕಾಂ ಮೊದಲನೇ ವರುಷದ ವಿದ್ಯಾಭ್ಯಾಸಕ್ಕಾಗಿ ಖ್ಯಾತ ಕ್ರಿಕೆಟಿಗ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಸಹಾಯ ಮಾಡಿದ್ದರು. ಅದೇ ರೀತಿ ಈಗ ಎರಡನೇ ವರುಷದ ಶುಲ್ಕವನ್ನು ಭರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಹೌದು.. ವಿದ್ಯಾರ್ಥಿಯ ನೆರವಿಗೆ ನಿಂತಿದ್ದ ಕ್ರಿಕೆಟ್ ಆಟಗಾರನ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯೊಂದನ್ನು ಪ್ರಸಾರ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಈ ವರ್ಷವೂ ಕಾಲೇಜಿನ ಶುಲ್ಕ ಭರಿಸುವ ಮೂಲಕ ಮಹತ್ವದ ಕಾರ್ಯ ಮಾಡಿದ್ದು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ಯುವ ಮುಖಂಡ ಮಂಜುನಾಥ ಹೆಬಸೂರ ಹಾಗೂ ವಿದ್ಯಾರ್ಥಿ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನೂ ವಿದ್ಯಾರ್ಥಿ ಅಮೃತ ಕೂಡ ಮೊದಲನೇ ವರುಷದಲ್ಲಿ ಉತ್ತಮ ಅಂಕಗಳಿಸುವ ಮೂಲಕ ಕ್ರಿಕೆಟಿಗ ಕೆ.ಎಲ್. ರಾಹುಲ್ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದಾನೆ. ಅದೇರೀತಿ ಮುಂದಿನ ವರುಷ ಕೂಡ ಹೆಚ್ಚಿನ ಅಂಕಗಳಿಸುವ ವಿಶ್ವಾಸವನ್ನು ವಿದ್ಯಾರ್ಥಿ ಅಮೃತ ನೀಡಿದ್ದಾನೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬುವಂತಿದ್ದ ಮಹಾಲಿಂಗಪುರದ ವಿದ್ಯಾರ್ಥಿಗೆ ಕ್ರಿಕೆಟ್ ಆಟಗಾರರಿಂದ ನೆರವನ್ನು ಕೊಡಿಸುವಲ್ಲಿ ಮಂಜುನಾಥ ಹೆಬಸೂರ ಕೊಂಡಿಯಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಯ ಜೀವನಕ್ಕೆ ಬೆಳಕಾಗಿದ್ದಾರೆ. ಕನ್ನಡಿಗರು ವಿದ್ಯಾವಂತರಾಗಬೇಕು ಎಂದು ಸಹಾಯ ಮಾಡುವ ಗುಣದಿಂದಲೇ ಕ್ರಿಕೆಟಿಗ ಕೆ ಎಲ್ ರಾಹುಲವರು ಕನ್ನಡಿಗರ ಮನಸ್ಸಿನಲ್ಲಿ ಸದಾಕಾಲ ಹಿರೋ ಆಗಿ ಉಳಿಯುತ್ತಾರೆ..

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/10/2024 06:36 pm

Cinque Terre

33.45 K

Cinque Terre

2

ಸಂಬಂಧಿತ ಸುದ್ದಿ