ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ - ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಬೈಲಹೊಂಗಲ: ತಾಲೂಕಿನ ಹಳೇ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಸಮೀಪ ಬಸ್ ಹಾಗೂ ದ್ವಿಚಕ್ರ ಮೋಟಾರ್ ಬೈಕ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ತುರಮರಿ ಗ್ರಾಮದ ರಾಮನಿಂಗ ಫಕೀರಪ್ಪ ಶಿಂಗಾಡಿ (40) ಮೃತ ವ್ಯಕ್ತಿ.

ಬೈಕ್ ಸವಾರ ಬೈಲಹೊಂಗಲದಿಂದ ತುರಮರಿ ಗ್ರಾಮಕ್ಕೆ ಸಾಗುವಾಗ ಬೆಳಗಾವಿ ಘಟಕಕ್ಕೆ ಸೇರಿದ ಸಾರಿಗೆ ಬಸ್ ಯಲ್ಲಮ್ಮನಗುಡ್ಡದಿಂದ ಬೈಲಹೊಂಗಲ ಕಡೆ ಬರುವಾಗ ಮಲಪ್ರಭಾ ನದಿ ಬಳಿ ಈ ದುರ್ಘಟನೆ ಸಂಭವಿಸಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬಸ್‌ನ ಮುಂಭಾಗದಲ್ಲಿ ಸಿಲುಕಿತ್ತು. ಸ್ಥಳಕ್ಕೆ ಡಿ ವೈ ಎಸ್ ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿ ಎಸ್ ಐ ಎಫ್.ವೈ ಮಲ್ಲೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಸಾರ್ವಜನಿಕರು ಶವ ಸಾಗಿಸುವಲ್ಲಿ ನೇರವಾಗಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

04/10/2024 10:36 pm

Cinque Terre

30.08 K

Cinque Terre

0

ಸಂಬಂಧಿತ ಸುದ್ದಿ