ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮಾ ಇಂಡಸ್ಟ್ರಿಯಲ್ಲೇ ಸಿಕ್ಕಾಪಟ್ಟೆ ಸಂಭಾವನೆ ಪಡೆಯುವ ನಟಿ ಯಾರು ಗೊತ್ತಾ?

ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡಿಯುತ್ತಿರುವ ನಟಿ ಯಾರು ಎಂದು ಕೇಳಿದ್ರೆ? ಥಟ್‌ ಅಂತ ನೆನಪಿಗೆ ಬರುವುದು ದೀಪಿಕಾ,ಆಲಿಯಾ ಆದ್ರೆ ನಿಮ್ಮ ಗೆಸ್‌ ವ್ರಾಂಗ್‌ ಹಯೆಸ್ಟ್‌ ಪೇಮೆಂಟ್‌ ಪಡೆದುಕೊಳ್ಳುತ್ತಿರುವ ನಟಿ ಅಂದ್ರೆ ಸೌತ್‌ ಸ್ಟಾರ್‌ ನಯನತಾರ. ರಜನಿಕಾಂತ್, ಶಾರುಖ್ ಖಾನ್, ಜಯರಾಮ್ ಮತ್ತು ನಾಗಾರ್ಜುನ ಅಕ್ಕಿನೇನಿ ಅವರೊಂದಿಗೆ ಕೆಲಸ ಮಾಡಿದ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಇವರು.

2018 ರಲ್ಲಿ ಫೋರ್ಬ್ಸ್ ಇಂಡಿಯಾದ ʼಸೆಲೆಬ್ರಿಟಿ 100' ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ದಕ್ಷಿಣ ಭಾರತದ ಪ್ರಮುಖ ಮಹಿಳಾ ನಟಮಣಿಯಾಗಿದ್ದಾರೆ ಇವರು.

20 ವರ್ಷಗಳಲ್ಲಿ 80 ಚಲನಚಿತ್ರಗಳು ಮತ್ತು ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ನಯನತಾರ ಮೊದಲು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು ನಂತರ ಕೊನೆಗೆ ಚನಚಿತ್ರ ಪ್ರವೇಶ ಪಡೆದರು.ಪ್ರಭುದೇವ ಅವರೊಂದಿಗೆ ಮೂರು ವರ್ಷ ಡೇಟಿಂಗ್‌ ಮಾಡಿ ನಂತರ ಮದುವೆಯಾಗ್ತರೆ ಅನ್ನುವ ರೂಮರ್‌ ಇತ್ತಾದ್ರೂ ಅದೂ ಕೈಗೂಡಲಿಲ್ಲ.2015 ರಲ್ಲಿ ನಾನು ರೌಡಿ ಧಾನ್ ಚಿತ್ರದಲ್ಲಿ ಕೆಲಸ ಮಾಡುವಾಗ ವಿಘ್ನೇಶ್ ಶಿವನನ್ನು ಭೇಟಿಯಾಗಿ ವಿವಾಹವಾಗಿ ಇದೀಗ ಬಾಡಿಗೆ ತಾಯ್ತನ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ.

Edited By : Somashekar
PublicNext

PublicNext

18/09/2024 07:27 pm

Cinque Terre

20.48 K

Cinque Terre

0

ಸಂಬಂಧಿತ ಸುದ್ದಿ