ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಟ್ ಲಿಸ್ಟ್‌ ಸಿದ್ದಮಾಡಿಕೊಂಡು ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಅಮೆರಿಕದ 11 ವರ್ಷದ ಬಾಲಕ ಅರೆಸ್ಟ್...ವಿಡಿಯೋ ವೈರಲ್

ಫ್ಲೋರಿಡಾ (ಅಮೆರಿಕ) : ಅಮೆರಿಕದಲ್ಲಿ 11 ವರ್ಷದ ಬಾಲಕನೊಬ್ಬನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕಾರಣ ಬಾಲಕನ ಬಳಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹವಿದೆ. ಮಾತ್ರವಲ್ಲದೆ ಎರಡು ಶಾಲೆಗಳ ಮೇಲೆ ದಾಳಿ ನಡೆಸಿ ಯಾರನ್ನೆಲ್ಲಾ ಹತ್ಯೆ ಮಾಡಬೇಕು ಎಂದು ಈ ಬಾಲಕ ‘ಹಿಟ್ ಲಿಸ್ಟ್’ ರೆಡಿ ಮಾಡಿಕೊಂಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಅಮೆರಿಕದ ಫ್ಲೋರಿಡಾ ರಾಜ್ಯದ ಈ ಬಾಲಕ ಇನ್ನೂ ಪ್ರೌಢ ಶಾಲಾ ವಿದ್ಯಾರ್ಥಿ. ಈತನ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸುವ ಬೆದರಿಕೆ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ. ತಾನು ವ್ಯಾಸಂಗ ಮಾಡುತ್ತಿರುವ ಪ್ರೌಢ ಶಾಲೆ ಹಾಗೂ ಸಮೀಪದ ಮತ್ತೊಂದು ಶಾಲೆಯಲ್ಲಿ ಗುಂಡಿನ ದಾಳಿ ನಡೆಸೋದಾಗಿ ಈತ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ನೀಡಿದ್ದು, ‘ಈ ಬಾಲಕ ತಾನು ಯಾವೆಲ್ಲಾ ಶಾಲೆಗಳ ಮೇಲೆ ದಾಳಿ ನಡೆಸುತ್ತೇನೆ, ಯಾವ ಶಾಲೆಯಲ್ಲಿ ಯಾವ ವಿದ್ಯಾರ್ಥಿ ಮೇಲೆ ದಾಳಿ ನಡೆಸಬೇಕು ಅನ್ನೋದನ್ನ ಹೆಸರು ಸಮೇತ ಬರೆದು ಇಟ್ಟಿದ್ದ. ಆದರೆ, ವಿಚಾರಣೆ ವೇಳೆ ಈತ ಇದೆಲ್ಲವೂ ಕೇವಲ ಜೋಕ್ ಎಂದು ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಕೇವಲ 11 ವರ್ಷ ವಯಸ್ಸಿನ ಬಾಲಕನಿಗೆ ಪೊಲೀಸರು ಕೈ ಕೋಳ ತೊಡಿಸಿ ನಿಲ್ಲಿಸಿರುವ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾಲಕನನ್ನು ಸದ್ಯ ಜೈಲಿನಲ್ಲಿ ಇರಿಸಲಾಗಿದೆ. ಬಾಲಕನ ಬಳಿ ಮಾದಕ ವಸ್ತು ಕಳ್ಳಸಾಗಣೆದಾರರ ಬಳಿ ಇರುವ ರೀತಿ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ. ಅತ್ಯಾಧುನಿಕ ಬಂದೂಕುಗಳು, ಪಿಸ್ತೂಲ್‌ಗಳು, ಸಮುರಾಯ್ ಶೈಲಿಯ ಖಡ್ಗ, ಕತ್ತಿ, ಚಾಕು ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕ ತನ್ನ ಸಹಪಾಠಿಗಳ ಜೊತೆ ಫೇಸ್‌ಟೈಮ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಚಾಟ್ ಮಾಡುವಾಗ ತನ್ನ ಬಳಿ ಇರುವ ಶಸ್ತ್ರಾಸ್ತ್ರಗಳ ಸಂಗ್ರಹ ಹಾಗೂ ತಾನು ಸಿದ್ದಪಡಿಸಿ ಇಟ್ಟಿರುವ ಹಿಟ್ ಲಿಸ್ಟ್‌ ಪ್ರದರ್ಶನ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈತನ ಸಹಪಾಠಿ ಬಾಲಕನೊಬ್ಬ ತನ್ನ ಪೋಷಕರ ಮುಖೇನ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

Edited By : Nirmala Aralikatti
PublicNext

PublicNext

18/09/2024 02:04 pm

Cinque Terre

48.21 K

Cinque Terre

2

ಸಂಬಂಧಿತ ಸುದ್ದಿ