ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮೋದಿ ಅದ್ಭುತ ವ್ಯಕ್ತಿ', ಮುಂದಿನ ವಾರ ಅವರನ್ನ ಭೇಟಿಯಾಗ್ತೀನಿ ಎಂದ ಟ್ರಂಪ್‌

ವಾಷಿಂಗ್ಟನ್‌: ಮುಂದಿನ ವಾರ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ ಮಿಚಿಗನ್‌ನಲ್ಲಿ ಪ್ರಚಾರ ಮಾಡುವಾಗ ಈ ವಿಚಾರ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ ಎಂದು ಟ್ರಂಪ್ ಬಣ್ಣಿಸಿದ್ದಾರೆ.

ಮೋದಿ ಅವರು ಮುಂದಿನ ವಾರ ನನ್ನನ್ನು ಭೇಟಿಯಾಗಲು ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಅವರ ಭೇಟಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಪ್ರಧಾನಿ ಮೋದಿ ಅವರು ಸೆ.21 ರಿಂದ 23 ರವರೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಅವರು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Edited By : Abhishek Kamoji
PublicNext

PublicNext

18/09/2024 12:46 pm

Cinque Terre

106.47 K

Cinque Terre

9

ಸಂಬಂಧಿತ ಸುದ್ದಿ