ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಂಟ್ ಮೇರೀಸ್ "ದ್ವೀಪಯಾನ' ಪ್ರಾರಂಭ : 4 ತಿಂಗಳ ನಿರ್ಬಂಧ ತೆರವು

ಮಲ್ಪೆ : ರಾಜ್ಯದ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್ ಮೇರೀಸ್ ದ್ವೀಪಯಾನ‌ ಪ್ರಾರಂಭಗೊಂಡಿದೆ. ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ಮುಗಿದಿದ್ದು, ಸೆಪ್ಟೆಂಬರ್ 15 ಕ್ಕೆ ಮತ್ತೆ ದ್ವೀಪ ಯಾನ ಆರಂಭಗೊಳ್ಳುತ್ತಿದೆ. ಮಲ್ಪೆ ಬೀಚ್ ನಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ ಎಂದು ಪ್ರತಿವರ್ಷ ಮೇ 15ರಿಂದ ಸೆಪ್ಟೆಂಬರ್ 14ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.

ಮಲ್ಪೆ ಬೀಚ್ ಮತ್ತು ಮೀನುಗಾರಿಕೆ ಬಂದರಿನ ಪಶ್ಚಿಮ ಭಾಗದಲ್ಲಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್‌ ಗಳ ವ್ಯವಸ್ಥೆ ಇದೆ. ರಾಜ್ಯದ ಮೂಲೆಮೂಲೆಯ ಪ್ರವಾಸಿಗರು ಇಲ್ಲಿಗೆ ಮೋಜು ಮಸ್ತಿಗಾಗಿ ಆಗಮಿಸುತ್ತಾರೆ.ಸುಂದರ ಬೋಟಿಂಗ್ ವ್ಯವಸ್ಥೆ ,ಬೀಚ್ ಮತ್ತು ಪ್ರಾಕೃತಿಕ ಸೌಂದರ್ಯ ...ಈ ಮೂರರ ಒಟ್ಟು ಮೊತ್ತವೇ ಈ ಸೈಂಟ್ ಮೇರೀಸ್ ದ್ವೀಪ.ಇದೀಗ ದ್ವೀಪಯಾನ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಇತ್ತ ಕಡೆ ಮುಖ ಮಾಡುತ್ತಿದ್ದಾರೆ.

Edited By : Suman K
Kshetra Samachara

Kshetra Samachara

16/09/2024 04:39 pm

Cinque Terre

4.37 K

Cinque Terre

0

ಸಂಬಂಧಿತ ಸುದ್ದಿ