ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾವೂರು: ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇದರ ಶತಮಾನೋತ್ಸವ,1 ಕೋ.ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕಾವೂರು: ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇದರ ಶತಮಾನೋತ್ಸವ ಸಂದರ್ಭದಲ್ಲಿ ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ. ನೂತನ ಕಟ್ಟಡದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಸಮಾರಂಭ ಬುಧವಾರ ನಡೆಯಿತು.

ಮಂಗಳೂರು ನಗರ ಉತ್ತರದ ಶಾಸಕರಾದ ಡಾ.ಭರತ್‌ ಶೆಟ್ಟಿ ವೈ ಹಾಗೂ ಕಟ್ಟಡದ ದಾನಿ, ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್‌ ಅವರು ಶಂಕು ಸ್ಥಾಪನೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಶಾಸಕರು ಇಲ್ಲಿನ ಶಾಲೆ ನೂರು ವರ್ಷಗಳನ್ನು ಪೂರೈಸುತ್ತಿದ್ದು ಸಾವಿರ ಸಾವಿರ ಮಂದಿ ವಿದ್ಯಾರ್ಥಿಗಳು ಕಲಿತು ಇಂದು ಸಮಾಜದ ಉನ್ನತ ಸ್ತರದಲ್ಲಿದ್ದಾರೆ. ಇದೀಗ ಶಾಲೆಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಕೇಶವ ಅಮೀನ್‌ ಉತ್ತಮ ಧ್ಯೆಯದೊಂದಿಗೆ ಮುಂದಾಗಿದ್ದು ಶ್ಲಾಘನೀಯ. ಇತರ ಮೂಲಸೌಕರ್ಯ ಸೇರಿದಂತೆ ಸುಸಜ್ಜಿತ ಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಉತ್ತರವಲಯ ಇದರ ಜೇಮ್್ಸ ಕುಟಿನೋ

ಮನಪಾ ಸದಸ್ಯರಾದ ಸುಮಂಗಲಾ ರಾವ್, ಕಾವೂರು ಸಿಆ‌ರ್ ಪಿ ದೀಪಿಕಾ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚ೦ದ್ರಹಾಸ್‌ ಕಾರ್ಯದರ್ಶಿಗಳಾದ ವಿಕೇಶ್ ಮತ್ತು ಲಾವಣ್ಯ ಶೆಟ್ಟಿ, ನ್ಯಾಯವಾದಿ ಗುರುಪ್ರಸಾದ್ ,ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಾವತಿ ಸುರೇಂದ್ರನಾಥ ಶೆಟ್ಟಿ,ಭುಜಂಗ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷಲಕ್ಷ್ಮಣ ಛಲವಾದಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿತೇಶ್ ಕಾವೂರು, ಅಜಿತ್, ಶಿತೇಶ್ ಕೊಂಡೆ, ಸಮಾಜ ಸೇವಕರಾದ ‌ ಹಸನಬ್ಬ, ಪೆಲ್ಲಿರೆಗೋ.ಅಶ್ವಿನಿ, ಗೋಕುಲ್ ದಾಸ್ ಪ್ರಭು, ಅರ್ಚನಾ, ಕೃಷ್ಣಪ್ಪ ಸಾಲ್ಯಾನ್, ಕುಸುಮಕರ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಎಸ್‌ ಡಿಎಂಸಿಯ ಸದಸ್ಯರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ ಚೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Edited By : PublicNext Desk
Kshetra Samachara

Kshetra Samachara

18/09/2024 05:15 pm

Cinque Terre

570

Cinque Terre

0

ಸಂಬಂಧಿತ ಸುದ್ದಿ