ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 'ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಿಸಲಾಗುವುದು'

ಬೆಂಗಳೂರು : ದಾಸರಹಳ್ಳಿ ವಲಯದಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ ಸಕ್ರಿಯವಾಗಿ ಮುಚ್ಚುವ ಕೆಲಸ‌ ಮಾಡಲಾಗುತ್ತಿದೆ ಎಂದು ವಲಯ ಆಯುಕ್ತರಾದ ಗಿರೀಶ್, ಐಎಫ್ಎಸ್ ರವರು ತಿಳಿಸಿದರು.

ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದ ದಾಸರಹಳ್ಳಿ ವಲಯ ವ್ಯಾಪ್ತಿಯ ಸುಬ್ರತೊ ಮುಖರ್ಜಿ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ದಾಸರಹಳ್ಳಿ‌ ವಲಯದಲ್ಲಿ ಒಂದು ವಿಧಾನಸಭಾ ಕ್ಷೇತ್ರ ಮಾತ್ರ ಬರಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಚಿಕ್ಕದಾದ ವಲಯವಾಗಿದೆ. ಈ ವಲಯವು ಕೇವಲ 27.82 ಚ.ಕಿ.ಮೀ ವ್ಯಾಪ್ತಿಯಲ್ಲಿದ್ದು, ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಉಳಿದ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುವುದೆಂದು ಹೇಳಿದರು.

ವಲಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುಲು ಸುಮಾರು 20 ಲೋಡ್ ಡಾಂಬರಿನ ಅವಶ್ಯಕತೆಯಿದೆ. ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳು ಹಾಗೂ ಇಂಜಿನಿಯರ್ ಗಳು ಗುರುತಿಸುವ ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚುವ ಕೆಲಸ‌ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ಸೇರಿ ಒಟ್ಟು 46.62 ಕಿ.ಮೀ ಪ್ರಮುಖ‌ ರಸ್ತೆಗಳಿದ್ದು, ಬಹುತೇಖ ರಸ್ತೆ ಗುಂಡಿಗಳನ್ನು‌ ಮುಚ್ಚಲಾಗಿದೆ. ವಿವಿಧ ಇಲಾಖೆಗಳಿಂದ ರಸ್ತೆ ಕತ್ತರಿಸುವ ಭಾಗವನ್ನು ಸದರಿ ಇಲಾಖೆಗಳಿಂದ ಮುಚ್ಚಿಸಿ ದುರಸ್ತಿ ಪಡಿಸಲಾಗುತ್ತಿದೆ ಎಂದು ಹೇಳಿದರು.

Edited By : Vinayak Patil
PublicNext

PublicNext

15/09/2024 03:17 pm

Cinque Terre

7.86 K

Cinque Terre

0

ಸಂಬಂಧಿತ ಸುದ್ದಿ