ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 15 ನಿಮಿಷ ಪ್ರಶ್ನೆ ಓದಬೇಕು! - ತಲೆನೋವು ತಂದ ಇಲಾಖೆಯ ರೂಲ್ಸ್

ಬೆಂಗಳೂರು: ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ಪ್ರಶ್ನೆಯನ್ನು ಮಕ್ಕಳು ಓದಿ ಉತ್ತರ ಬರೆಯಬೇಕು. ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕು ಅನ್ನೋ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಮೌಲ್ಯ ನಿರ್ಣಯ ‌ಮಂಡಳಿ ಪರೀಕ್ಷಾವಧಿಯಲ್ಲಿ 15 ನಿಮಿಷ ಕಡ್ಡಾಯ ಪ್ರಶ್ನೆಗಳನ್ನು ಓದುವ ನ್ಯೂ ರೂಲ್ ತಂದಿದೆ. ಈ ನಯಾ ನಿಯಮ ಈಗ ಚರ್ಚೆಗೆ ಗ್ರಾಸವಾಗಿದೆ. ಅವೈಜ್ಞಾನಿಕ ನಿರ್ಧಾರ ಅನ್ನೋ ಟೀಕೆಗೆ ಕಾರಣವಾಗಿದೆ.

ಹೌದು. ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡಲಾಗಿದೆ. ಅಂದ್ರೆ 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಇದೇ ಶೈಕ್ಷಣಿಕ ವರ್ಷದಿಂದ 2 ಗಂಟೆ 45 ನಿಮಿಷಕ್ಕೆ ನಿಗದಿ ಮಾಡಲಾಗಿದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ನಲ್ಲಿ ಮೂರು ಗಂಟೆ ಕಡ್ಡಾಯವಾಗಿ ಇರಲೇಬೇಕು. ಪರೀಕ್ಷೆಯ ಆರಂಭದಲ್ಲಿನ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ಕೊಡಲಾಗಿದೆ. ಕರ್ನಾಟಕ ಪರೀಕ್ಷಾ ಮೌಲ್ಯ ನಿರ್ಣಯ ‌ಮಂಡಳಿ ನಿರ್ಧಾರಕ್ಕೆ ಕೃಪಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡಳಿ ದಿನಕ್ಕೊಂದು ಆದೇಶ ಹೊರಡಿಸುತ್ತಾರೆ. ಹಲವು ನಿರ್ಧಾರಗಳಿಂದ ಹಿಂದೆ ಮಕ್ಕಳ ಮೇಲೆ ವೈಜ್ಞಾನಿಕವಾಗಿ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಕೂಡ ಮಂಡಳಿಗೆ ಅರಿವಿಲ್ಲ. ಆದ್ರೆ ಒಂದು ಆದೇಶ ಮಾಡುವಾಗ ಕನಿಷ್ಠ ಜ್ಞಾನ ಇರಬೇಕುಅದಕ್ಕೆ ಸಂಬಂಧ ಪಟ್ಟ ಪ್ರಾಂಶುಪಾಲರು, ಪೋಷಕ ಸಂಘಟನೆಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡದೇ ನಿರ್ಧಾರ ಮಾಡೋದು ಸರಿಯಲ್ಲಪರೀಕ್ಷಾ ಅವಧಿಯನ್ನ ಮೂರು ಗಂಟೆಯಿಂದ 2.45 ನಿಮಿಷಕ್ಕೆ ಇಳಿಕೆ ಮಾಡಿದ್ದಾರೆ. ಈ ಆದೇಶ ಹಿಂಪಡೆಯಬೇಕು ಅಂತ ಅಗ್ರಾಹಿಸಿದ್ದಾರೆ..

Edited By : Ashok M
PublicNext

PublicNext

15/09/2024 12:11 pm

Cinque Terre

16.66 K

Cinque Terre

0

ಸಂಬಂಧಿತ ಸುದ್ದಿ