ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ವಂಡಾರು ಕಾಡಿನಲ್ಲಿ ಕಾಡುಕೋಣ ಬೇಟೆ!? - ಪ್ರಾಣಿಯ ಅವಶೇಷ ಫೊರೆನ್ಸಿಕ್ ಲ್ಯಾಬ್ ಗೆ ರವಾನೆ

ಕುಂದಾಪುರ: ವಂಡಾರಿನ ಕಾಡಿನಲ್ಲಿ ಯಾವುದೋ ಕಾಡು ಪ್ರಾಣಿಯ ಅವಶೇಷ ಪತ್ತೆಯಾಗಿದೆ. ಮೇಲ್ನೋಟಕ್ಕೆ ಅದು, ಕಾಡುಕೋಣ, ಕಡವೆ ಅಥವಾ ಜಾನುವಾರಿನ ಅವಶೇಷ ಎಂಬುದು ತಿಳಿಯುತ್ತಿದೆ. ಆದರೆ ಸ್ಪಷ್ಟವಾಗಿ ಯಾವ ಪ್ರಾಣಿಯದ್ದು ಎನ್ನುವುದು ದೃಢಪಟ್ಟಿಲ್ಲ. ಗುರುವಾರ ರಾತ್ರಿ ವಂಡಾರಿನ ಕಾಡಿನಲ್ಲಿ ಬೇಟೆಯಾಡಿರುವ ಸಾಧ್ಯತೆಗಳು ದಟ್ಟವಾಗಿದೆ.

ಶುಕ್ರವಾರ ಬೆಳಿಗ್ಗೆ ಕಾಡುಕೋಣದ ಕರುಳಿನಂತೆ ತೋರುತ್ತಿದ್ದ ಅವಶೇಷಗಳು ಪತ್ತೆಯಾಗಿದ್ದು, "ರಾತ್ರಿ ಯಾರೋ ಬಂದರಂತೆ ಕಾಡು ಕೋಣ ಹೊಡೆದರಂತೆ ಟಿ ಟಿ ಗಾಡಿಯಲ್ಲಿ ತೆಗೆದುಕೊಂಡು ಹೋದರಂತೆ" ಎನ್ನುವ ಸುದ್ಧಿ ಎಲ್ಲೆಡೆ ವೈರಲ್ಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಈ ಸುದ್ಧಿ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಬಿದ್ದಿದ್ದ ಕರುಳು ಮತ್ತು ಸೆಗಣಿ ಯಾವ ಪ್ರಾಣಿಯದ್ದು ಎನ್ನುವುದನ್ನು ಪತ್ತೆ ಹಚ್ಚರು ಅಧಿಕಾರಿಗಳು ವೈದ್ಯರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ವೈದ್ಯರ ವರದಿಯ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/09/2024 04:14 pm

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ