ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಪೊಲೀಸ್ ಕ್ವಾರ್ಟರ್ಸ್ ಸ್ವಚ್ಛತಾ ಕಾರ್ಯದಲ್ಲಿ ರೌಡಿಶೀಟರ್ಸ್ ಭಾಗಿ-10 ಹಾವು ಪತ್ತೆ, ಸಂರಕ್ಷಣೆ

ದೊಡ್ಡಬಳ್ಳಾಪುರ: ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಸ್ವಚ್ಛತಾ ಕಾರ್ಯ ಆಯೋಜನೆ ಮಾಡಲಾಗಿದ್ದು, ಈ ಸ್ವಚ್ಛತಾ ಕಾರ್ಯದಲ್ಲಿ ಕಾಲೇಜ್ ವಿದ್ಯಾರ್ಥಿಗಳೊಂದಿಗೆ ರೌಡಿಶೀಟರ್ಸ್ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರೂ ಭಾಗವಹಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿದರು.

ದೊಡ್ಡಬಳ್ಳಾಪುರ ನಗರದಲ್ಲಿರುವ ಪೊಲೀಸ್ ಕ್ವಾರ್ಟಸ್ ನಲ್ಲಿ ಸ್ವಚ್ಛತಾ ಶ್ರಮದಾನ ಆಯೋಜನೆ ಮಾಡಲಾಗಿದ್ದು, ಶ್ರಮದಾನದಲ್ಲಿ ದೊಡ್ಡಬಳ್ಳಾಪುರ ಪದವಿ ಕಾಲೇಜ್ ನ ಎನ್ ಎಸ್ ಎಸ್ ವಿದ್ಯಾರ್ಥಿಗಳು, ಸ್ಕೌಟ್ಸ್ ಆಂಡ್ ಗೈಡ್ಸ್, ಪೊಲೀಸ್ ಸಿಬ್ಬಂದಿ ಮತ್ತು ರೌಡಿಶೀಟರ್ಸ್ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೂ ಸೇರಿದಂತೆ 300 ಮಂದಿ ಭಾಗವಹಿಸಿದರು.

ಎರಡು ಎಕರೆ ವಿಸ್ತೀರ್ಣವಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ 70ಕ್ಕೂ ಹೆಚ್ಚು ಮನೆಗಳಿವೆ. ಕ್ವಾರ್ಟರ್ಸ್ ಅವರಣದಲ್ಲಿ ದಟ್ಟ ಪೊದೆ- ಗಿಡಗಂಟಿಗಳು ಬೆಳೆದು ಹಾವುಗಳ ಉಪಟಳ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಗಿತ್ತು. ಈ ವೇಳೆ 10ಕ್ಕೂ ಹೆಚ್ಚು ಹಾವುಗಳು ಪತ್ತೆಯಾಗಿದ್ದು, ಹಾವುಗಳ ಸಂರಕ್ಷಣೆಗಾಗಿ ಉರಗ ತಜ್ಞ ರಾಮಾಂಜಿ ಎಂಬವವರನ್ನು ನಿಯೋಜನೆ ಮಾಡಲಾಗಿದ್ದು, 10 ಹಾವುಗಳನ್ನು ಸುರಕ್ಷಿತವಾಗಿ ಹಿಡಿದ ಅವರು ಕಾಡಿಗೆ ಬಿಟ್ಟಿದ್ದಾರೆ.

Edited By : Ashok M
PublicNext

PublicNext

07/09/2024 07:48 am

Cinque Terre

39.13 K

Cinque Terre

0

ಸಂಬಂಧಿತ ಸುದ್ದಿ