ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡ್ತಿದೆ- ಸಚಿವ ಎಚ್.ಕೆ. ಪಾಟೀಲ್

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಯಲ್ಲಿ ವನ್ಯ ಮಂಡಳಿ ತಿರಸ್ಕಾರ ವಿಚಾರ, ಸಚಿವ ಸಂಪುಟದಲ್ಲಿ ಈ ಕುರಿತು ಸುದೀರ್ಘವಾದ ಚರ್ಚೆ ಆಗಿದೆ. ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ಮುಂದೆ ಸಹ ಹಾಕಲಾಗಿದೆ.

ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ ಇದು. ಅರಣ್ಯ ಇಲಾಖೆಯವರು ಈಗಾಗಲೇ ಅನುಮತಿ ಕೊಡಲು ಸಿದ್ಧರಿದ್ದರು. ಆದರೆ, ಕೇಂದ್ರ ಸರ್ಕಾರದವರು 10 ವರ್ಷಗಳಿಂದ ಕಾಟ ಕೊಡ್ತಾ ಬಂದಿದ್ದಾರೆಂದು ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಚುನಾವಣೆಗೆ ಬಂದಾಗಲೇ ಕೇಂದ್ರದಲ್ಲಿ ಆಡಳಿತದಲ್ಲಿ ಇರುವವರು ಬಿಜೆಪಿಯವರು. ಚುನಾವಣಾ ಸಂದರ್ಭದಲ್ಲಿ ಅನುಮತಿ ಕೊಡಿಸುತ್ತೇವೆ, ಯಾವುದೇ ಕಾರಣಕ್ಕೂ ಬಿಡಲ್ಲ ಅನುಮತಿ ಸಿಗುತ್ತದೆ ಎಂಬ ಭರವಸೆ ಕೊಡ್ತಾ ಬಂದರು. ವನ್ಯಜೀವಿ ಮಂಡಳಿ ಅವರನ್ನು ನಾ ಕೇಳುವೆ, ಗೋವಾದ್ದು 400 ಕೆವಿ ವಿದ್ಯುತ್ ಲೈನ್ ಎಳೆಯಲು 435 ಎಕರೆ ಭೂಮಿಯನ್ನು ಚಿಟಿಕೆ ಹೊಡೆಯುವುದರೊಳಾಗಿ ಕ್ಲೀಯರ್ ಮಾಡತಿರಿ. ನಿಮ್ಮ ಕೇಂದ್ರದ ಸಚಿವರು ಪತ್ರ ಬರೆಯುತ್ತಾರೆ ಬೇಗಾ ಇದನ್ನು ಕ್ಲೀಯರ್ ಮಾಡಬೇಕು ಅಂತಾರೆ.

ಆದರೆ ಕರ್ನಾಟಕ ಅಂದರೆ ಅಷ್ಟೊಂದು ತಾತ್ಸಾರನಾ..? ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕಾನೂನು ತೊಡಕು ನಿವಾರಣೆ ಆಗಿದೆ. ನ್ಯಾಯಾಧೀಕರಣದಲ್ಲಿ ತೀರ್ಮಾನ ಸಹ ಆಯಿತು. ಮೊದಲು ಅಂತಾರಾಜ್ಯ ವಿವಾದ ಬಗೆಹರಿಯಲಿ ಎಂದರಿ,

ಕರ್ನಾಟಕಕ್ಕೆ ಆದ ಅನ್ಯಾಯ ಸಹಿಸಲ್ಲ.

ಈಗ ತಕ್ಷಣ ನಮ್ಮ ಮುಖ್ಯಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆಯುತ್ತಾರೆ. ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚೆ,

ನಂತರ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/09/2024 07:37 am

Cinque Terre

92.05 K

Cinque Terre

6

ಸಂಬಂಧಿತ ಸುದ್ದಿ