ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿಕಾರಿಬೆಟ್ಟು : “ಏಕ್ ಪೇಡ್ ಮಾ ಕೇ ನಾಮ್” ಘೋಷ ವಾಕ್ಯದಡಿ ಉಚಿತ ಸಸಿಗಳ ವಿತರಣೆ

ಮುಲ್ಕಿ:ಸರಕಾರದ ಸುತ್ತೋಲೆಯಂತೆ “ಏಕ್ ಪೇಡ್ ಮಾ ಕೇ ನಾಮ್” ಘೋಷ ವಾಕ್ಯದಡಿ ಎಂ ಆರ್ ಪಿ ಎಲ್ ಸಹಭಾಗಿತ್ವದಲ್ಲಿ

ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿನಡ್ಕ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುದಾನಿತ ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಢಶಾಲೆ ಮತ್ತು ಸಾರ್ವಜನಿಕ ರುದ್ರ ಭೂಮಿಯ ಆವರಣದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಎಮ್.ಆರ್.ಪಿ.ಎಲ್. ಸಂಸ್ಥೆಯ ಶ್ರೀನಿವಾಸ್ ಆರ್. ಮಾತನಾಡಿ ನಿಸರ್ಗದ ಬಗ್ಗೆ ಕಾಳಜಿ ವಹಿಸುವ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯು ನಿರಂತರ ಕಾರ್ಯಕ್ರಮ ನಡೆಸುತ್ತಿದೆ ಎಂದರು

ಅತಿಕಾರಿಬೆಟ್ಟು ಗ್ರಾ ಪಂ ಅಧ್ಯಕ್ಷೆ ಶಶಿಕಲಾ

ಕಾರ್ಯಕ್ರಮದಲ್ಲಿ ಎಮ್.ಆರ್.ಪಿ.ಎಲ್. ಸಂಸ್ಥೆಯ ಇಂಜಿನಿಯರ್ ಪವಿತ್ರಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯರಾದ ಜಯಕುಮಾರ್ ಮಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ, ಕಾರ್ಯದರ್ಶಿ ಮಂಜುನಾಥ, ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟರಮಣ ಕಾಮತ್, .ಅಂಬರೀಷ್ ಲಮಾಣಿ, ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/09/2024 07:46 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ