ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಬ್ಲಿಕ್ ನೆಕ್ಸ್ಟ್ ಸತತ ವರದಿ - ತಾರಿಹಾಳದ MSPCಗೆ ನೋಟಿಸ್ ಜಾರಿ

ಧಾರವಾಡ: ಪಬ್ಲಿಕ್ ನೆಕ್ಸ್ಟ್ ಸತತ ವರದಿಗಳ ನಂತರ ಎಚ್ಚೆತ್ತುಕೊಂಡ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ನಾವು ವರದಿ ಪ್ರಸಾರ ಮಾಡಿದಂತೆ ಹಲವಾರು ಲೋಪದೋಷಗಳನ್ನು ಪರಿಗಣಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ನೋಡಿ ಏನ್ ಎಲ್ಲಾ point ಹಾಕಿದ್ದಾರೆ ಅಂತ...

* ಮುಖ್ಯವಾಗಿ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವುದಿಲ್ಲ, ಹಾಳಾದ ಬೆಲ್ಲವನ್ನು ಸರಬರಾಜುದಾರರಿಗೆ ಹಿಂದಿರುಗಿಸದೇ ಘಟಕದಲ್ಲಿಯೇ ದಾಸ್ತಾನು ಇರಿಸಿಕೊಂಡಿರುತ್ತೀರಿ.

* ಗೋಧಿಯಲ್ಲಿ ನುಶಿ ಹುಳು ಇದ್ದು ಕಾಲಕಾಲಕ್ಕೆ ಭೂಮಿಗೇಶನ್ ಮಾಡಿಸಿ ಸ್ವಚ್ಛಗೊಳಿಸಲು ಕ್ರಮವಹಿಸಿರುವುದಿಲ್ಲ.

* ಸಂಸ್ಕರಿಸಿದ ಆಹಾರ ಸಾಮಗ್ರಿ ಪುಷ್ಟಿ ಪದಾರ್ಥವು ನೆಲದ ಮೇಲೆಲ್ಲಾ ಎಲ್ಲೆಂದರಲ್ಲಿ ಚೆಲ್ಲಾಡಿದ್ದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರುವುದಿಲ್ಲ.

* ಆಹಾರ ಸಂಸ್ಕರಣೆ ವೇಳೆಯಲ್ಲಿ ಘಟಕದ ಸದಸ್ಯರೆಲ್ಲ ಕಡ್ಡಾಯವಾಗಿ ಕೈಗವಸು, ತಲೆಗೆ ಕ್ಯಾಪ್, ಮಾಸ್ಕ್ ಎಫ್ರಾನ್‌ಗಳನ್ನು ಬಳಸಲು ಹಾಗೂ ಟ್ರೇಗಳನ್ನು ಬಳಸಲು ಸೂಚನೆ ಇದ್ದಾಗಲೂ ಸಹಿತ ಶುಚಿತ್ವ ಕಾಪಾಡಿಕೊಂಡು ವೈಜ್ಞಾನಿಕ ರೀತಿಯಲ್ಲಿ ಆಹಾರ ಪದಾರ್ಥ ತಯಾರಿಸದೇ, ತಾಡಪತ್ರಿ ಮೇಲೆ ಸಾಮಗ್ರಿ ಸುರಿದು ಪ್ಯಾಕಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಇದು ಇಲಾಖೆ ನೀಡಿದ ಸೂಚನೆಗಳ ಸ್ಪಷ್ಟ ಉಲ್ಲಂಘನೆ ಮಾಡಿರುವುದು ಕಂಡುಬಂದಿತು.

* ಮಾರುಕಟ್ಟೆಯಿಂದ ಖರೀದಿಸಿದ ತೊಗರಿ ಬೇಳೆಯು ಉತ್ತಮ ಗುಣಮಟ್ಟ ಹೊಂದಿರುವುದಿಲ್ಲ. ದ್ವಿತೀಯ ದರ್ಜೆ ಬೇಳೆ ಇದ್ದು ಇದು ಫಲಾನುಭವಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.

* ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಲು ಸಂಗ್ರಹಿಸಿದ ಬೆಲ್ಲದಲ್ಲಿ ಉಪ್ಪಿನ ಅಂಶವು ಹೆಚ್ಚಾಗಿರುವುದನ್ನು ಪರಿಶೀಲಿಸಲಾಯಿತು.

ಇದು ಕೇವಲ ನೋಟಿಸ್ ಆಗಿ ಅಷ್ಟೇ ಉಳಿಯದೆ ಮುಂದಿನ ದಿನಗಳಲ್ಲಿ ಈ ರೀತಿಯ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಿ ಅನ್ನೋದು ಪಬ್ಲಿಕ್ ನೆಕ್ಸ್ಟ್ ಕಳಕಳಿ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/09/2024 04:21 pm

Cinque Terre

120.3 K

Cinque Terre

2

ಸಂಬಂಧಿತ ಸುದ್ದಿ