ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಶಿಕ್ಷಕ ಮನೆತನದ ಅಕ್ಷರಧಾತೆಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

ದೊಡ್ಡಬಳ್ಳಾಪುರ: ಎರಡು ಕೊಠಡಿಗಳ ಸರ್ಕಾರಿ ಶಾಲೆಯನ್ನ 10 ಕೊಠಡಿಗಳ ವಿಶಾಲ ಶಾಲೆಯಾಗಿ ಮಾಡಿದಲ್ಲದೆ, ಶಾಲೆಗೆ ಹೈಟೆಕ್ ಸ್ವರ್ಶ ನೀಡಿದ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ, ಶಿಕ್ಷಕ ಮನೆತನ ಹಿನ್ನಲೆ ಹೊಂದಿರುವ ಅವರ ಒಡಹುಟ್ಟಿದ ಆರು ಮಂದಿ ಸಹೋದರಿಯರು ಶಿಕ್ಷಕಿಯರು, ಕೈಹಿಡಿದ ಗಂಡ ಶಿಕ್ಷಕ ಹಾಗೂ ಮಗಳು ಸಹ ಶಿಕ್ಷಕರಾಗಿವುದು ವಿಶೇಷವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಿ ಎಮ್.ಹೆಚ್ ರವರಿಗೆ 2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ, ತಮ್ಮ 21ನೇ ವಯಸ್ಸಿನಲ್ಲೇ ಶಿಕ್ಷಕ ವೃತ್ತಿಯನ್ನ ಆರಂಭಿಸಿರುವ ಅವರು 34 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಯನ್ನ ಸಲ್ಲಿಸಿದ್ದು, ಸಾವಿರಾರು ಮಕ್ಕಳಿಗೆ ವಿದ್ಯೆಯನ್ನ ಧಾರೆ ಎರೆದಿದ್ದಾರೆ.

2016 ರಲ್ಲಿ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಂದ ಅವರು ಶಾಲೆಯ ವಾತಾವರಣವನ್ನ ಬದಲಾಯಿಸಿದರು, ಎರಡು ಕೊಠಡಿಯಲ್ಲಿದ್ದ ಶಾಲೆಯನ್ನ ಇವತ್ತು 10 ಕೊಠಡಿಗಳ ವಿಶಾಲ ಶಾಲೆಯನ್ನಾಗಿ ಬದಲಾಯಿಸಿದ್ದಾರೆ, ದಾನಿಗಳು ಮತ್ತು ವಿವಿಧ ಕಂಪನಿಗಳ ಸಿಎಸ್ ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗೆ ಹೈಟೆಕ್ ಸ್ವರ್ಶವನ್ನ ನೀಡಿದ್ದಾರೆ, ಎರಡು ಎಕರೆ ವಿಸ್ತೀರ್ಣವಿರುವ ಶಾಲೆಯನ್ನ ಉದ್ಯಾನ ವನದಂತೆ ಬದಲಾಯಿಸಿದ್ದಾರೆ, ಇದರ ಜೊತೆಯಲ್ಲಿ ಸೋಲಾರ್ ವಿದ್ಯುತ್, ಕಂಪ್ಯೂಟರ್, ವಿಶಾಲವಾದ ಡೈನಿಂಗ್, ಹಾಲ್ ಮತ್ತು ಹೈಟೆಕ್ ಶೌಚಾಲಯದ ಸೌಲಭ್ಯವನ್ನ ಶಾಲೆಗೆ ತರುವಲ್ಲಿ ಶ್ರಮಿಸಿದ್ದಾರೆ.

Edited By : Suman K
PublicNext

PublicNext

05/09/2024 01:49 pm

Cinque Terre

30.15 K

Cinque Terre

1

ಸಂಬಂಧಿತ ಸುದ್ದಿ