ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಸುದ್ದಿಗೆ ಮರುಗಿ ವಿಶೇಷ ಚೇತನ ವಿದ್ಯಾರ್ಥಿ ಬಾಳಲ್ಲಿ ಬೆಳಕಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್‌ನ ಒಂದು ಮಾನವೀಯತೆಯ ವರದಿ. ಈ ಸುದ್ದಿಯನ್ನು ನೋಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಒಬ್ಬ ವಿಶೇಷಚೇತನ ವಿದ್ಯಾರ್ಥಿ ಬಾಳಲ್ಲಿ ಬೆಳಕಾಗಿದ್ದಾರೆ.

ಇಟಲಿಗೆ ಹೋಗಲು ವೀಸಾ ಸಿಗದೆ ಪರದಾಡುತ್ತಿದ್ದ ವಿದ್ಯಾರ್ಥಿಯನ್ನು ಗಮನಿಸಿ ಪಬ್ಲಿಕ್ ನೆಕ್ಸ್ಟ್‌ದಲ್ಲಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಜೋಶಿ ಅವರು ಕೇಂದ್ರ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರ ಜೊತೆ ಮಾತನಾಡಿ ವೀಸಾ ಕೊಡಿಸಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರೋಡ ರವಿನಗರದ ನಿವಾಸಿ ಸುಹಾಸ ಧಾರವಾಡ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇಟಲಿಗೆ ಹೋಗಲು ವೀಸಾ ಅರ್ಜಿಯನ್ನು ಹಾಕಿದ್ದರು. ಆದ್ರೆ ಇಟಲಿ ರಾಯಭಾರಿ ಇವರ ವೀಸಾ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ವಿಶೇಷವಾಗಿ ಸುದ್ದಿಯನ್ನು ಬಿತ್ತರಿಸಿದ ನಂತರ, ಈ ಬಗ್ಗೆ ಮುತುವರ್ಜಿವಹಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸುಬ್ರಹ್ಮಣ್ಯಂ ಜೈಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸಿ, ಇಟಲಿ ರಾಯಭಾರಿಯಿಂದ ವಿದ್ಯಾರ್ಥಿಗೆ ವೀಸಾ ದೊರೆಯುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಬಹುದಿನಗಳ ಕನಸು ಈಗ ನನಸಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದ್ದು ಹೀಗೆ.

ಇನ್ನು ದೃಷ್ಟಿಹೀನತೆಯನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಿದ್ಧನಾಗಿ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದ ಸುಹಾಸಗೆ, ಇಟಲಿ ವೀಸಾ ಅರ್ಜಿ ತಿರಸ್ಕಾರ ಮಾಡಿದ್ದು ಸಾಕಷ್ಟು ಸಂಕಷ್ಟ ತಂದೊಡ್ಡಿತ್ತು. ಇಟಲಿಯ ಟೆಂಟ್ರೊ ವಿಶ್ವವಿದ್ಯಾಲಯದ ಅರ್ಹತಾ ಪರೀಕ್ಷತೇರ್ಗಡೆಯಾಗಿದ್ದರೂ, ವಿದೇಶಕ್ಕೆ ಹಾರಲು ಸಜ್ಜಾಗಿದ್ದ ಸುಹಾಸ ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯೊಂದನ್ನು ಪ್ರಸಾರ ಮಾಡಿತ್ತು. ಅಲ್ಲದೇ ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಸಾಕಷ್ಟು ಶ್ರಮವಹಿಸಿ ವಿದ್ಯಾರ್ಥಿಯ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ. ಸುಹಾಸ ಕುಟುಂಬಸ್ಥರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಹಾಗೂ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಇಂತಹ ಮಹತ್ತರ ಕಾರ್ಯಗಳ ಬಗ್ಗೆ ಸಾಕಷ್ಟು ವರದಿಯನ್ನು ಮಾಡ್ತಾ ಬಂದಿದೆ. ಅಷ್ಟೇ ಅಲ್ಲದೆ ಅದೆಷ್ಟೋ ಜನಮನ್ನಣೆ ಕೂಡ ಗಳಿಸಿದೆ. ಈ ವಿದ್ಯಾರ್ಥಿಯ ಬಾಳಲ್ಲಿ ನಮ್ಮ ವರದಿ ಬೆಳಕಾಗಿದ್ದು, ಎಲ್ಲರಿಗೂ ಸಂತಸ ತುಂಬಿದೆ.

ವರದಿ: ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/09/2024 03:53 pm

Cinque Terre

160.76 K

Cinque Terre

10

ಸಂಬಂಧಿತ ಸುದ್ದಿ