ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ - ಕಂಪ್ಲೀಟ್ ಮಾಹಿತಿ ಪಬ್ಲಿಕ್ ನೆಕ್ಸ್ಟ್‌ನಲ್ಲಿ‌..!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ತಾಲೂಕಾವಾರು ಮಾಹಿತಿ ಇಲ್ಲಿದೆ ನೋಡಿ..

ಜೂನ್ ತಿಂಗಳಲ್ಲಿ ಧಾರವಾಡಕ್ಕೆ 40%, ಹುಬ್ಬಳ್ಳಿ ಗ್ರಾಮೀಣ 08%, ಕಲಘಟಗಿ 13%, ಕುಂದಗೋಳ 68%, ನವಲಗುಂದ 27%, ಹುಬ್ಬಳ್ಳಿ ಶಹರ 40%, ಅಳ್ನಾವರ 19% ಹಾಗೂ ಅಣ್ಣಿಗೇರಿಗೆ 16% ಮಳೆಯಾಗಿದ್ದು, ಕುಂದಗೋಳ ತಾಲೂಕಿನಲ್ಲಿಯೇ ದಾಖಲೆಯ ಪ್ರಮಾಣದಲ್ಲಿ ಅಂದರೆ 68% ಮಳೆಯಾಗಿದೆ.

ಇನ್ನೂ ಜುಲೈ ತಿಂಗಳಲ್ಲಿ ಧಾರವಾಡಕ್ಕೆ 16%, ಹುಬ್ಬಳ್ಳಿ ಗ್ರಾಮೀಣ 31%, ಕಲಘಟಗಿ 47%, ಕುಂದಗೋಳ 48%, ನವಲಗುಂದ 31%, ಹುಬ್ಬಳ್ಳಿ ಶಹರ 42%, ಅಳ್ನಾವರ 43% ಹಾಗೂ ಅಣ್ಣಿಗೇರಿಗೆ 22% ಮಳೆಯಾಗಿದೆ. ಧಾರವಾಡ ಹಾಗೂ ಕುಂದಗೋಳ ತಾಲೂಕಿಗೆ ಜೂನ್ ತಿಂಗಳಿಗಿಂತ ಜುಲೈನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ನವಲಗುಂದ, ಹುಬ್ಬಳ್ಳಿ ಶಹರ, ಅಳ್ನಾವರ, ಅಣ್ಣಿಗೇರಿ ತಾಲೂಕಿಗೆ ಜೂನ್ ತಿಂಗಳಿಗಿಂತ ಜುಲೈನಲ್ಲಿ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Edited By : Nagaraj Tulugeri
Kshetra Samachara

Kshetra Samachara

26/07/2024 09:47 pm

Cinque Terre

25.39 K

Cinque Terre

1

ಸಂಬಂಧಿತ ಸುದ್ದಿ