ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಮ್ಮಿನಬಾವಿಯಲ್ಲಿ ಡೆಂಗ್ಯೂ ಜಾಗೃತಿ: ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದ ಜಿಲ್ಲಾಧಿಕಾರಿ

ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪ್ರತಿ ಶುಕ್ರವಾರ ಒಂದೊಂದು ಏರಿಯಾ ಹಾಗೂ ಒಂದೊಂದು ಊರುಗಳಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ ವಾರದ ಧಾರವಾಡದ ಕೆಲಗೇರಿಯಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಾರ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಚಾಲನೆ ನೀಡಿದರು.

ಡೆಂಗ್ಯೂ ಜ್ವರ ಮತ್ತು ಚಿಕೂನ್‌ಗುನ್ಯಾದಂತಹ ಕಾಯಿಲೆಗಳ ಬಗ್ಗೆ ಜನಸಾಮಾನ್ಯರು ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು? ಗ್ರಾಮದಲ್ಲಿ ಆರೋಗ್ಯ ಇಲಾಖೆ ಏನೆಲ್ಲ ಮುಂಜಾಗ್ರತೆಗಳನ್ನು ವಹಿಸಿರುತ್ತದೆ? ಅದಕ್ಕೆ ಗ್ರಾಮದ ಜನಸಾಮಾನ್ಯರು ಯಾವ ರೀತಿಯ ಸಹಕಾರ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಜನರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಡೆಂಗ್ಯೂ ಜ್ವರದ ಬಗ್ಗೆ ಹೇಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಕಿರು ನಾಟಕ ಮಾಡುವ ಮೂಲಕ ಗಮನಸೆಳೆದರು.

ಜನೆವರಿಯಿಂದ ಇಲ್ಲಿಯವರೆಗೆ 3,500 ಜನರನ್ನು ತಪಾಸಣೆ ಮಾಡಲಾಗಿದೆ. 521 ಪ್ರಕರಣಗಳು ಪಾಸಿಟಿವ್ ಕೇಸ್ ದಾಖಲಾಗಿವೆ. ನಿನ್ನೆ 150 ಜನರ ರಕ್ತ ಪರಿಶೀಲನೆ ಮಾಡಲಾಗಿದೆ ಅದರಲ್ಲಿ 7 ಜನರ ಮಾದರಿ ಪಾಸಿಟಿವ್ ಬಂದಿದೆ. ಮಹಿಳೆಯರು ಮಳೆಯ ನೀರನ್ನು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕೆಲ ಮನೆಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

Edited By : Manjunath H D
Kshetra Samachara

Kshetra Samachara

26/07/2024 07:49 pm

Cinque Terre

32.17 K

Cinque Terre

0

ಸಂಬಂಧಿತ ಸುದ್ದಿ