ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕಾರ್ಗಿಲ್ ವಿಜಯ ದಿವಸ್, 45 ನಿವೃತ್ತ ಯೋಧರಿಗೆ ಗೌರವಾರ್ಪಣೆ

ಬ್ರಹ್ಮಾವರ : ಕಾರ್ಗಿಲ್ ವಿಜಯ ದಿವಸ್ 25 ನೇ ವರ್ಷದ ಅಂಗವಾಗಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕ ಮತ್ತು ನಾನಾ ಸಂಘ ಸಂಸ್ಥೆಯವರ ಸಹಕಾರದಿಂದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮತ್ತು ನಿವೃತ್ತ 45 ಸೇನಾನಿಗಳಿಗೆ ಗೌರವಾರ್ಪಣೆ ಕಾಲೇಜಿನ ಸಭಾಂಗಣದಲ್ಲಿ ಇಂದು (ಶುಕ್ರವಾರ) ಸಂಜೆ ಜರುಗಿತು.

ಮಧ್ಯಾಹ್ನ ಕಾಲೇಜಿನಿಂದ ಸಾರ್ವಜನಿಕರು ಮತ್ತು ನಿವೃತ್ತ ಯೋಧರೊಂದಿಗೆ ದೇಶದ ಸೇನೆಗೆ, ಯೋಧರಿಗೆ ಜೈಕಾರದೊಂದಿಗೆ ನೂರಾರು ವಿದ್ಯಾರ್ಥಿಗಳು ಜಾಥಾ ಮೂಲಕ ಬ್ರಹ್ಮಾವರ ನಗರದಾದ್ಯಂತ ಸಂಚರಿಸಿದರು. ಬಳಿಕ ಕಾಲೇಜಿನ ಪ್ರಿನ್ಸಿಪಾಲ್ ರವೀಂದ್ರ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮತ್ತು ಪರಿಸರದ 45 ಮಂದಿ ನಿವೃತ್ತ ಯೋಧರಿಗೆ ಗೌರವಾರ್ಪಣೆ ನಡೆಯಿತು.

ಈ ಸಂದರ್ಭ ಎನ್ ಎಸ್ ಎಸ್ ಘಟಕದ ಸವಿತಾ ಏರ್ಮಾಳ್ ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮತ್ತು ಸೈನಿಕರ ಕುರಿತು ನಿಜವಾದ ಅರ್ಥ ಕಲ್ಪಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಮಾಜಿ ಸೈನಿಕ ಸಂಘದ ಚಂದ್ರ ಅಮೀನ್ ,ಕೇಶವ ಮಲ್ಪೆ , ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ಗ್ರಾಮಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ ಆರ್ , ಪೋಷಕರ ಸಂಘದ ಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗಾರ್ , ಶಾಲಾ ಮುಖ್ಯೋಪಧ್ಯಾಯಿನಿ ಉಮಾ, ಸೈನಿಕ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

26/07/2024 07:12 pm

Cinque Terre

52.67 K

Cinque Terre

0

ಸಂಬಂಧಿತ ಸುದ್ದಿ