ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎರಡು ಡೆಂಘೀ ಪ್ರಕರಣ ಪತ್ತೆಯಾದರೆ ಹಾಟ್ ಸ್ಪಾಟ್ ಅಂತಾ ಗುರ್ತಿಸ್ತೇವೆ - ದಿನೇಶ್ ಗುಂಡೂರಾವ್

ಬೆಂಗಳೂರು: ಡೆಂಘೀ ಕಡಿವಾಣಕ್ಕೆ ಫೀಲ್ದಿಗಿಳಿದು ಜಾಥಾ ಮಾಡಿದ ಆರೋಗ್ಯ ಸಚಿವರು ಡೆಂಘೀ ತಡೆಗೆ ಜನತೆಗೆ ಸಹಕರಿಸಲು ಕೋರಿದ್ರು.. ಇಂದು ಸಿಂಗನಾಯಕನಹಳ್ಳಿಯಲ್ಲಿ ಜಾಥಾ ಮಾಡಿದ್ದೇವೆ ಇಲ್ಲಿ ಒಂದೆರಡು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಜನರಿಗೆ ಅರಿವು ಮೂಡಿಸಿದ್ವಿ . ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೇವೆ ಎಂದರು.

ಎರಡು ಪ್ರಕರಣ ಪತ್ತೆಯಾದ್ರೆ ಹಾಟ್ ಸ್ಪಾಟ್ ಅಂತಾ ಗುರ್ತಿಸುತ್ತೇವೆ .ಅಂತಾ ಜಾಗಗಳಲ್ಲಿ ಫೀವರ್ ಕ್ಲಿನಿಕ್ ತೆರೆಯುತ್ತೇವೆ ಎಲ್ಲೆಡೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗ್ತಿದೆ .ಶಾಲಾ ಮಕ್ಕಳು ಫ್ರಾಕ್,ಚಡ್ಡಿ ಹಾಕಿ ಬರ್ತಾರೆ .ಆಗ ಸೊಳ್ಳೆಗಳ ಕಡಿತ ಆಗುತ್ತೆ .ಅದಕ್ಕಾಗಿ ಮಕ್ಕಳಿಗೆ ಓಡೋಮಸ್ ಕ್ರೀಮ್ ನೀಡಿ ಜಾಗೃತಿ ಮೂಡಿಸಿದ್ದೇವೆ.ಎಲ್ಲೆಲ್ಲಿ ಹೆಚ್ಚು ಕೇಸ್ ಇದೆ…ಅಲ್ಲಿ ಜಾಥಾ ಮಾಡ್ತಿದ್ದೇವೆ . ಮುಂದಿನ ವಾರ ಮಹದೇವಪುರ ವ್ಯಾಪ್ತಿಯಲ್ಲಿ ಜಾಥಾ ಮಾಡ್ತೀವಿ ಅಂತ ಸಚಿವರು ತಿಳಿಸಿದ್ರು.

Edited By : Manjunath H D
PublicNext

PublicNext

26/07/2024 07:06 pm

Cinque Terre

45.05 K

Cinque Terre

0