ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

7ನೇ ವೇತನ ಆಯೋಗ ಜಾರಿ ಎಫೆಕ್ಟಾ? ಇಲ್ಲ ಖಜಾನೆಯಲ್ಲಿ ಹಣ ಇಲ್ವಾ? ಗೌರಿ ಹಬ್ಬ ಬಂದ್ರು ಪೊಲೀಸರ ಕೈ ಸೇರದ ವೇತನ

ಬೆಂಗಳೂರು: ಭರ್ಜರಿಯಾಗಿ ಗಣೇಶ ಹಬ್ಬ ಮಾಡಬೇಕೆಂದಿದ್ದ ಪೊಲೀಸರಿಗೆ ನಿರಾಸೆಯಾಗಿದೆ. ವೇತನ ಬರದೆ ಹಬ್ಬ ಮಾಡಲಾಗದೇ ಕೈ-ಕೈ ಹಿಚುಕುತ್ತಿದ್ದಾರೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಪೊಲೀಸರಿಗೆ ಆಗಸ್ಟ್ ತಿಂಗಳ ಸಂಬಳ ನೀಡಲು ಸರ್ಕಾರ ವಿಳಂಬ ಧೋರಣೆ ತೋರಿದೆ.

7ನೇ ವೇತನ ಆಯೋಗ ಜಾರಿಯಿಂದಾಗಿ ಪೊಲೀಸರಿಗೆ ಈ ತಿಂಗಳ ಸಂಬಳ ಬಂದಿಲ್ಲ ಅಂತ ಹೇಳಲಾಗ್ತಿದೆ. ಆದ್ರೆ ಕೆಲವರು ಮಾತ್ರ ಸರ್ಕಾರ ಖಜಾನೆ ಬರಿದಾಗಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ವೇತನ ವಿಳಂಬದ ಪ್ರಶ್ನಿಸಿದಾಗ, 7ನೇ ವೇತನ ಆಯೋಗ ಜಾರಿಯಿಂದ ಪರಿಷ್ಕೃತ ವೇತನವನ್ನ ಇಲಾಖೆಯ ಎಚ್ ಆರ್ ಎಂಎಸ್ ನಲ್ಲಿ ಅಳವಡಿಸಲು ತಡವಾಗಿದೆ. ರಾಜ್ಯ ಪೊಲೀಸ್ ಇಲಾಖೆಯಿಂದ ಖಜಾನೆ ಇಲಾಖೆಗೆ ತಡವಾಗಿ ಪರಿಷ್ಕೃತ ವೇತನ ಪಟ್ಟಿ ಕಳುಹಿಸಲಾಗಿತ್ತು. ಅಲ್ಲದೆ ಖಜಾನೆ ಇಲಾಖೆಯಿಂದಲೂ ಪರಾಮರ್ಶೆ ನಡೆಸುತ್ತಿದೆ. ಪೊಲೀಸರು ಮಾತ್ರವಲ್ಲದೆ, ಬೇರೆ ಬೇರೆ ಇಲಾಖೆಯ ನೌಕರರಿಗೂ ವೇತನ ನೀಡಿಲ್ಲ ಎನ್ನಲಾಗುತ್ತಿದೆ. ಇನ್ನು ಪೊಲೀಸ್ ಇಲಾಖೆಯ ಕೆಲ ವಿಭಾಗಗಳಿಗ ಸಂಬಳ ಆಗಿದೆ. ಆದ್ರೆ ಬಹುತೇಕತರಿಗೆ ಸಂಬಳ ಆಗಿಲ್ಲ. ತಿಂಗಳ ಕೊನೆಯ ಸಂಬಳ ನೆಚ್ಚಿಕೊಂಡು ಮನೆ ಬಾಡಿಗೆ ಇಎಂಐ ಅಂತ ಕಮಿಟ್ ಆಗಿದ್ದ ಸಿಬ್ಬಂದಿಗೆ ಗೌರಿ ಗಣೇಶ ಹಬ್ಬ ಆಚರಣೆಗೂ ತೊಡಕಾಗಿದೆ.

Edited By : Vijay Kumar
PublicNext

PublicNext

06/09/2024 02:08 pm

Cinque Terre

19.25 K

Cinque Terre

2

ಸಂಬಂಧಿತ ಸುದ್ದಿ