ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತೂ ಬಸ್ ಇಲ್ಲದ ಊರಿಗೆ ಬಂದೇ ಬಿಡ್ತು ಹುಬ್ಬಳ್ಳಿ-ಬುಡರಸಿಂಗಿ ಸಾರಿಗೆ ಬಸ್

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಹುಬ್ಬಳ್ಳಿ: ಈ ಗ್ರಾಮದಲ್ಲಿ ಸಾರಿಗೆ ಬಸ್ಸಿನ ವ್ಯವಸ್ಥೆನೇ ಇಲ್ಲದಂತಾಗಿತ್ತು. ಈ ಊರಿನ ಜನರು ಬೇರೆ ಊರಿಗೆ ಹೋಗಬೇಕಾದ್ರೆ ರಾಷ್ಟ್ರೀಯ ಹೆದ್ದಾರಿ ವರೆಗೆ ನಡೆದುಕೊಂಡು ಬಂದು ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಇದನ್ನು ಗಮನಿಸಿದ ಪಬ್ಲಿಕ್ ನೆಕ್ಸ್ಟ್ ಈ ಊರಿನ ಬಸ್ ಸಮಸ್ಯೆ ಬಗ್ಗೆ ವರದಿಯನ್ನು ಬಿತ್ತರಿಸಿತ್ತು. ವರದಿ ನೋಡಿದ ಸಾರಿಗೆ ಅಧಿಕಾರಿಗಳು ಈಗ ಈ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಸಾರಿಗೆ ಬಸ್ ಇಲ್ಲದೆ, ಶಾಲಾ- ಕಾಲೇಜಿಗೆ ವಿದ್ಯಾರ್ಥಿಗಳು ಹೋಗಬೇಕಾದ್ರೆ ರಾಷ್ಟ್ರೀಯ ಹೆದ್ದಾರಿ ವರೆಗೆ ನಡೆದುಕೊಂಡು ಹೋಗಬೇಕಿತ್ತು. ಅಷ್ಟೇ ಅಲ್ದೆ ವಯಸ್ಕರು ಕೂಡ ಎರಡು ಕಿ.ಮೀ. ನಡೆದುಕೊಂಡು ಹೋಗಿಯೇ ಬಸ್ ಹತ್ತಬೇಕಿತ್ತು. ಅದರಲ್ಲಿ ರಾತ್ರಿ ಹೊತ್ತು ಈ ಊರಿಗೆ ಹೋಗಬೇಕಾದ್ರೆ ಹರಸಾಹಸ ಪಡಬೇಕಿತ್ತು. ಈ ಎಲ್ಲ ಸಮಸ್ಯೆಗಳ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಬಿತ್ತರಿಸಿದ 15 ದಿನಗಳಲ್ಲಿಯೇ ಸಾರಿಗೆ ಸಂಸ್ಥೆ ಈ ಊರಿಗೆ ಇಂದಿನಿಂದ ಬಸ್ ಸೌಲಭ್ಯ ಮಾಡಿಕೊಟ್ಟಿದೆ.

ಇನ್ನು ಈ ಬಸ್ ಗ್ರಾಮಕ್ಕೆ ಬರುತ್ತಿದ್ದಂತೆಯೇ ಊರಿನವರ ಮುಖದಲ್ಲಿ ಸಂತೋಷ ಉಕ್ಕಿ ಹರಿದಿದೆ. ಗ್ರಾಮದ ಹಿರಿಯರು, ಮಕ್ಕಳು ಬಸ್‌ಗೆ ವಿಶೇಷ ಪೂಜೆ ಕೂಡ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್ ಗೆ ಕೂಡ ಅಭಿನಂದನೆ ತಿಳಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ಈ ಬುಡರಸಿಂಗಿ ಗ್ರಾಮಕ್ಕೆ ಯಾವತ್ತೂ ಸಾರಿಗೆ ಬಸ್ಸಿನ ವ್ಯವಸ್ಥೆನೇ ಇಲ್ಲದ ಹೊತ್ತಿನಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿ, ಗ್ರಾಮದ ಜನರ ಸಮಸ್ಯೆಯನ್ನು ಆಲಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈಗ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಅಧಿಕಾರಿಗಳು ಆದಷ್ಟು ಸರಿಯಾದ ಸಮಯಕ್ಕೆ ಬಸ್‌ ಬಿಡಿ ಎಂಬುವುದೇ ಈಗ ಎಲ್ಲರ ಆಶಯ.

ಸ್ಲಗ್:‌ ನಮ್ಮೂರಿಗೆ ಬಸ್‌ ಬಂತು...ಗ್ರಾಮಸ್ಥರ ಹರ್ಷ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/07/2024 04:57 pm

Cinque Terre

272.4 K

Cinque Terre

4

ಸಂಬಂಧಿತ ಸುದ್ದಿ