ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವೈದ್ಯರೇ ಇಲ್ಲದ 100 ಬೆಡ್ ಆಸ್ಪತ್ರೆ - ನಿತ್ಯವೂ ರೋಗಿಗಳ ಪರದಾಟ

ಕುಂದಗೋಳ: 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಎಂಬ ಹಣೆಪಟ್ಟಿ ಹೊತ್ತು ಜಿಲ್ಲಾ ಪಂಚಾಯತ್ ಅನುಮೋದನೆ ಪಡೆದು ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆಯಲು ಕಾದಿರುವ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು ಜನರು ಚಿಕಿತ್ಸೆಗಾಗಿ ಪರದಾಟ ನಡೆಸಿದ್ದಾರೆ.

ಕುಂದಗೋಳ ತಾಲೂಕು ಆಸ್ಪತ್ರೆಗೆ ನಿತ್ಯ ವಿವಿಧ ಆರೋಗ್ಯ ಸಮಸ್ಯೆ ಹೊತ್ತು ಬರುವ ಮಹಿಳೆಯರು, ಮಕ್ಕಳು ವಿಶೇಷವಾಗಿ ವೃದ್ಧರು, ಅಂಗವಿಕಲರು ಸೇರಿ ನೂರಾರು ಜನ ಬರುತ್ತಾರೆ. ಆದರೆ ತಮ್ಮ ರೋಗಕ್ಕೆ ಸಂಬಂಧಿಸಿದ ವೈದ್ಯರು ಆಸ್ಪತ್ರೆಯಲ್ಲಿ ಸಿಗದೆ ದೂರದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೋ ಇಲ್ಲವೆ ದುಪ್ಪಟ್ಟು ಹಣ ನೀಡಿ ಖಾಸಗಿ ಆಸ್ಪತ್ರೆಗೆ ಅಲೆಯುವ ದುಸ್ಥಿತಿ ಇದೆ.

ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಇರುವ 5 ಸ್ಪೆಷಲಿಸ್ಟ್ ವೈದ್ಯರ ಕೊರತೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಿಗೂ ಆಸ್ಪತ್ರೆ ನಿರ್ವಹಣೆ ಸಮಸ್ಯೆ ತಂದಿದೆ.

ವಾತಾವರಣದ ಬದಲಾವಣೆ ಎಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೋಗದ ಬಾಧೆ ಅತಿಯಾಗಿ ಆಸ್ಪತ್ರೆಗೆ ವಿವಿಧ ಚಿಕಿತ್ಸೆ ಅರಸಿ ಬರುವ ರೋಗಿಗಳು ವೈದ್ಯರೇ ಇಲ್ಲದೆ ಯಾತನೆ ಪಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಗಮನಿಸಿ ಬಡ ಜನರ ಆರೋಗ್ಯ ಕಾಳಜಿಗೆ ವೈದ್ಯರ ನೇಮಕ ಮಾಡಬೇಕಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Somashekar
Kshetra Samachara

Kshetra Samachara

19/07/2024 01:11 pm

Cinque Terre

21.77 K

Cinque Terre

0

ಸಂಬಂಧಿತ ಸುದ್ದಿ