ಹುಬ್ಬಳ್ಳಿ: ರಂಗಿತರಂಗ ನಂತರ ಥ್ರಿಲ್ಲರ್ ಮೂವಿ ಮಾಡಿದ್ದು ವಿಂಡೋಸೀಟ್ ಚಿತ್ರ, ಈ ಚಿತ್ರ ವಿಭಿನ್ನವಾಗಿದೆ. ಹಾಡುಗಳು ಕೂಡ ಚನ್ನಾಗಿ ಮೂಡಿ ಬಂದಿವೆ. ಶೀತಲ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಅವರ ಮೊದಲ ಚಿತ್ರ ವಿಭಿನ್ನವಾಗಿದೆ ಎಂದು ನಟ ನಿರೂಪ್ ಭಂಡಾರಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಂಗಿತರಂಗಕ್ಕಿಂತ ಈ ಚಿತ್ರ ಭಿನ್ನವಾಗಿದೆ. ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಇದು. ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಜುಲೈ 1 ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಎಂದರು. ವಿಂಡೋಸೀಟ್ ಚಿತ್ರಕ್ಕೆ ಸಂಗೀತವನ್ನು ಅರ್ಜುನ ಜನ್ಯ, ಛಾಯಾಗ್ರಹಣವನ್ನು ವಿಘ್ನೇಶ ರಾಜ್ ನೀಡಿದ್ದಾರೆ. ಚಿತ್ರವು ಕೊನೆಯವರೆಗೆ ಕುತೂಹಲವನ್ನು ಹಾಗೇ ಇರಿಸಿಕೊಂಡು ಹೋಗುತ್ತದೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ ಎಂದು ಚಿತ್ರದ ನಟ ನಿರೂಪ್ ಭಂಡಾರಿ ಹೇಳಿದರು.
Kshetra Samachara
23/06/2022 03:18 pm