ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಸಖತ್ ಗಮನ ಸೆಳೆಯುತ್ತವೆ.ವೈರಲ್ ಆದ ವಿಡಿಯೋದಲ್ಲಿ ಪುಟ್ಟ ಪೋರನೊಬ್ಬ ಟೀಚರ್ ಗೆ ಧಮ್ ಕೊಟ್ಟಿದ್ದು ಸಿಹಿಯಾಗಿದೆ.ಇತ್ತಿಚೆಗಷ್ಟೆ ವಿದ್ಯಾರ್ಥಿ ಶಿಕ್ಷಕಿಗೆ ಮುತ್ತು ಕೊಟ್ಟು ತಪ್ಪು ಒಪ್ಪಿಕೊಂಡ ವಿಡಿಯೋ ನೋಡಿದಿರಿ. ಈಗಾ ಇಲ್ಲೊಬ್ಬ ವಿದ್ಯಾರ್ಥಿಗೆ ಯಾವದೊ ಕಾರಣಕ್ಕೋ ಟೀಚರ್ ಗದರಿದ್ದಾರೆ. ಇವನಿಗೆ ದುಃಖ ಉಕ್ಕಿಬಂದಿದೆ. ಆಗ ಏನು ಹೇಳಿದ್ದಾನೆ ನೋಡಿ.
‘ನಮ್ಮ ಅಪ್ಪ ಗುಂಡು ಹಾರಿಸಿಬಿಡುತ್ತಾರೆ!’ ಈ ಮಾತು ಕೇಳಿದ ಎಲ್ಲರೂ ಶಾಕ್ ಆಗುವುದು ಸಾಮಾನ್ಯ ಆದರೆ ಈ ವಿಡಿಯೋ ಈಗಾಗಲೇ 6 ಲಕ್ಷಕ್ಕಿಂತಲೂ ಹೆಚ್ಚು ಜನರ ಮನಗೆದ್ದಿದೆ. 2.5 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 392 ಜನರು ರೀಟ್ವೀಟ್ ಮಾಡಿದ್ದಾರೆ. ನೋಡಿದ ತಕ್ಷಣ ಎಂಥ ಮುದ್ದಾದ ವಿಡಿಯೋ ಇದು ಎಂದೆನ್ನಿಸುವುದು ನಿಜ. ಮುಗ್ಧತೆಯಿಂದಲೇ ಈ ಮಗು ಹೀಗೆ ಸಂಭಾಷಿಸಿದ್ದರೂ ವಿಷಯ ಮಾತ್ರ ಗಂಭೀರ.
ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಈ ವಯಸ್ಸಿನಲ್ಲಿ ಅನುಕರಿಸುವುದೊಂದೇ ಅವುಗಳಿಗೆ ಗೊತ್ತಿರುತ್ತದೆ, ಆಲೋಚಿಸಿ ಮಾತನಾಡುವುದು ಎಲ್ಲ ಮಕ್ಕಳಿಂದಲೂ ಸಾಧ್ಯವಾಗುವುದಿಲ್ಲ. ಅಲ್ಲದೆ, ಹೀಗೆ ಸಂಭಾಷಣೆ ನಡೆಸುತ್ತಿರುವಾಗ ಕ್ಲಾಸಿನಲ್ಲಿಯ ಇತರ ಮಕ್ಕಳು ಮಗುವನ್ನು ನೋಡಿ ನಕ್ಕಾಗ ಆ ಮಗುವಿಗೆ ಅವಮಾನವಾದಂತಾಗುವುದಿಲ್ಲವೆ? ಇಂಥ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
PublicNext
24/09/2022 03:02 pm