ಜಾಗತಿಕವಾಗಿ ಪ್ರಖ್ಯಾತಿ ಪಡೆದಿರುವ ರಿಟೇಲ್ ಮಾರುಕಟ್ಟೆಯ ದೈತ್ಯ ವಾಲ್‌ಮಾರ್ಟ್ ಸಂಸ್ಥೆಯ ಒಂದು ದೊಡ್ಡ ಎಡವಟ್ಟು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದಲ್ಲಿ ಪೂಜಿಸಲಾಗುವ ಗಣೇಶನ ಫೋಟೋ ಬಳಸಿ ವಾಲ್‌ಮಾರ್ಟ್ ಸಂಸ್ಥೆ ವಿವಿಧ ವಿನ್ಯಾಸ ಒಳಉಡುಪು ಹಾಗೂ ಚಪ್ಪಲಿಗಳನ್ನು ತಯಾರಿಸಿ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಿತ್ತು.
ದೇವರ ಫೋಟೋಗಳನ್ನು ಇಷ್ಟು ಕೀಳು ಮಟ್ಟದಲ್ಲಿ ಉಪಯೋಗಿಸಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಭಾರತ ಹಾಗೂ ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿದ್ದು, ಬಾಯ್ಕಾಟ್ ವಾಲ್‌ಮಾರ್ಟ್ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ವಾಲ್‌ಮಾರ್ಟ್ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನ್ಲೈನ್ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮಾಪಣೆಯ ಕೇಳಿದೆ ಎಂದು ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷರಾದ ರಾಜನ್ ಜೆಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ ಪ್ರಾರಂಭದಲ್ಲಿ ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ವಾಲ್‌ಮಾರ್ಟ್ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿತ್ತು. ಈ ಕುರಿತು @ssaratht ಎಂಬ ಟ್ವಿಟರ್ ಖಾತೆಯಲ್ಲಿ ಡಿಸೆಂಬರ್ 6ರಂದು ಪೋಸ್ಟ್ ವೈರಲ್ ಆಗಿತ್ತು.
ಸದ್ಯ ವಾಲ್‌ಮಾರ್ಟ್ ತನ್ನ ಎಡವಟ್ಟಿಗೆ ಕ್ಷಮೆಯಾಚಿಸಿದೆ.
PublicNext
10/12/2024 06:39 pm