ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಏನಿದು ಆಶ್ಚರ್ಯ..! ಶವ ಪೆಟ್ಟಿಗೆ ಕಡೆ ನೋಡ ನೋಡುತ್ತಿದ್ದಂತೆ ಕಣ್ತೆರೆದ ಮೃತ ಮಹಿಳೆ - ಸುತ್ತಲಿದ್ದ ಜನ ದಿಗ್ಭ್ರಮೆ

ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ವಿಚಿತ್ರ ವಿಡಿಯೋಗಳಲ್ಲಿ ಶವಗಳು ಜೀವಂತವಾಗಿರುವ ಸುದ್ದಿಗಳನ್ನು ಹಾಗೂ ವಿಡಿಯೋಗಳನ್ನು ಕೂಡ ನೀವು ನೋಡಿರುತ್ತೀರಿ. ಅದೇ ರೀತಿ, ಇಲ್ಲಿ ಶವವು ಕ್ಯಾಮೆರಾದಲ್ಲಿ ಕಣ್ಣು ತೆರೆಯುತ್ತದೆ. ಸುತ್ತಲೂ ನಿಂತಿದ್ದ ಜನರು ಭಯಭೀತರಾಗುತ್ತಾರೆ. ಕೆಲವರು ಅಲ್ಲಿಂದ ಓಡಿಹೋಗುತ್ತಾರೆ. ಸದ್ಯ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

@DramaAlert ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಒಬ್ಬ ಮಹಿಳೆ ಶವಪೆಟ್ಟಿಗೆಯೊಳಗೆ ಮಲಗಿದ್ದಾಳೆ. ಅದರ, ಗಾಜಿನ ಮೇಲೆ ಮೇಣದಬತ್ತಿ, ಮೃತ ಮಹಿಳೆ ಫೋಟೋ ಮತ್ತು ಇತರ ವಸ್ತುಗಳನ್ನು ಇರಿಸಲಾಗಿದೆ. ಮಕ್ಕಳು ಅಮ್ಮ ಎಂದು ಅಳುತ್ತಿದ್ದಾರೆ. ಎಲ್ಲರೂ ದುಃಖಿತರಾಗಿ ಕಾಣುತ್ತಿದ್ದಾರೆ. ಆಗ ಥಟ್ಟನೆ ಈ ಶವದಲ್ಲಿ ಚಲನೆ ಕಂಡುಬರುತ್ತದೆ. ನಂತರ ಸುತ್ತಮುತ್ತಲಿನ ಜನರು ದಿಗ್ಭ್ರಮೆಗೊಳ್ಳುತ್ತಾರೆ.

ಈ ವಿಡಿಯೋ ಹಂಚಿಕೊಂಡವರಿಗೆ ಈ ಘಟನೆಯ ಮುಂದುವರಿದ ಭಾಗ ಏನಾಗಿದೆ ಎಂದು ಪ್ರಶ್ನೆ ಮಾಡಿ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಜನರ ಕುತೂಹಲವನ್ನು ತಣಿಸಿರುವ ವಿಡಿಯೋ ಹಂಚಿಕೊಂಡ ವ್ಯಕ್ತಿ ಇದಕ್ಕೆ ಸರಣಿ ಎಂಬಂತೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ.

ಇದರಲ್ಲಿ ಮಹಿಳೆ ಏಕೆ ಕಣ್ಣು ತೆರೆದಳು, ಮುಂದೆ ಅಲ್ಲಿ ಏನೆಲ್ಲಾ ಘಟನೆ ನಡೆದಿದೆ ಎಂಬ ಸಂಪೂರ್ಣ ಸತ್ಯ ಬಹಿರಂಗವಾಗಿದ್ದು, ಇದು ನಾಟಕ ಎಂದು ಬಹಿರಂಗವಾಗಿದೆ. ಮಹಿಳೆಯ ಶ್ವಾಸಕೋಶ ಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇಲ್ಲಿ ಜನರು ಮೃತ ವ್ಯಕ್ತಿ ಬದುಕಿ ವಾಪಸ್ ಬಂದರೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಸೆರೆ ಹಿಡಿಯುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಹೆಚ್ಚು ಶೇರ್‌ ಆದ ಈ ವಿಡಿಯೋಗಳಿಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

Edited By : Abhishek Kamoji
PublicNext

PublicNext

10/12/2024 10:36 pm

Cinque Terre

64.37 K

Cinque Terre

4

ಸಂಬಂಧಿತ ಸುದ್ದಿ