ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಟ್ಟ ಬಾಲಕನ ಮೇಲೆ ಎರಗಿದ ಬೀದಿನಾಯಿ, ಕಿತ್ತು ತಿನ್ನುವ ಭಯಾನಕ ವಿಡಿಯೋ ವೈರಲ್​!

ಕೇರಳ: ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ದಿನೇ ದಿನೇ ಬೀದಿನಾಯಿ ಕಡಿತದಿಂದ ಬಾದಿತರಾದವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ವರ್ಷ ಕೇರಳದಲ್ಲಿ ಒಟ್ಟು ಇಪ್ಪತ್ತೊಂದು ಜನರು ರೇಬಿಸ್ ಖಾಯಿಲೆಯಿಂದ ಮರಣ ಹೊಂದಿದ್ದಾರೆ.

ಇತ್ತೀಚೆಗಷ್ಟೇ ಕೇರಳದಲ್ಲಿ ಏಳನೇ ತರಗತಿ ಬಾಲಕನಿಗೆ ಬೀದಿನಾಯಿ ಕಚ್ಚಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದೇ ವಾರದಲ್ಲಿ ಅನೇಕ ಪ್ರಕರಣಗಳಾಗಿದ್ದು ಜನರು ಓಡಾಡಲು ಸಹ ಭಯದ ವಾತಾವರಣ ಸೃಷ್ಟಿಯಾಗಿದೆ. ಕೇರಳದಲ್ಲಿ ದೃಶ್ಯದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಾಲಕನೊಬ್ಬ ತನ್ನ ಸೈಕಲ್ ಹಿಡಿದು ಮನೆಯ ಮುಂದಿನ ರಸ್ತೆಯಲ್ಲಿ ತಿರುಗಾಡುತ್ತಿದ್ದ ಸಮಯದಲ್ಲಿ ಅದೇ ಬೀದಿಯಲ್ಲಿ ನಾಯಿಯೊಂದು ಓಡಿ ಬಂದು ಸೈಕಲ್ ಮೇಲೆ ಕೂತಿದ್ದ ಬಾಲಕನ ಮೇಲೆ ಆಕ್ರಮಣ ಮಾಡಿದೆ. ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರು ಹೌಹಾರಿದ್ದಾರೆ.

Edited By : Abhishek Kamoji
PublicNext

PublicNext

13/09/2022 06:04 pm

Cinque Terre

70.76 K

Cinque Terre

0

ಸಂಬಂಧಿತ ಸುದ್ದಿ