ಜಾತ್ರೆಯಲ್ಲಿ ಚಲಿಸುತ್ತಿದ್ದ ಜಾಯಿಂಟ್ ವೀಲ್ ನಿಂದ ಬಾಲಕಿ ಬಿದ್ದು, 60 ಅಡಿ ಎತ್ತರದಿಂದ ನೇತಾಡುತ್ತಾ ಬದುಕಿ ಬಂದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.
ಬಾಲೆ ಜಾಯಿಂಟ್ ವೀಲ್ನ ಕಬ್ಬಿಣದ ಸರಳು ಹಿಡಿದು ನೇತಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಲಕಿ ಜಾರಿಬೀಳುವುದನ್ನು ಮತ್ತು ರಾಡ್‌ನಲ್ಲಿ ತೂಗಾಡುತ್ತಿರುವುದನ್ನು ಗಮನಿಸಿದ ಅಲ್ಲಿದ್ದ ಜನರು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಬಾಲಕಿ ಸುರಕ್ಷಿತವಾಗಿದ್ದಾರೆ ಎಂದು ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ನಿಗಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
PublicNext
07/12/2024 08:47 pm