ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ಕುಡಿದುಕೊಂಡೇ ಪಂಚಾಯಿತಿ ಕಟ್ಟಡ ಏರಿದ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ನಡೆದಿದೆ.
ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಎಣ್ಣೆ ಗುಂಗಲ್ಲೆ ವ್ಯಕ್ತಿಯೊಬ್ಬ ಸಾರಾಯಿ ಬಂದ್ ಮಾಡಿ ಇಲ್ಲವಾದರೇ, ನಾನೀಲ್ಲೆ ಪ್ರಾಣ ಬಿಡ್ತೀನಿ ಅಂತ ಬೆದರಿಸಿರುವುದು ನೀವು ಈ ವಿಡಿಯೋದಲ್ಲಿ ಕಾಣಬಹುದು. ಕಟ್ಟಡದ ಮೇಲೆ ಕುಳಿತು ತಾಲೂಕಿನ ಮುಖಂಡರಿಗೆ ಕರೆದು ವ್ಯಕ್ತಿ ಸಾರಾಯಿ ಬಂದ್ ಮಾಡಬೇಕೆಂದು ಭಾಷಣ ಮಾಡಿದ್ದಾನೆ. ಸದ್ಯ ಈ ವಿಡಿಯೋಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕಾಮೆಂಟ್ ಮಾಡುತ್ತಿದ್ದಾರೆ..
PublicNext
05/09/2022 09:00 pm