ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಹಾಗೆಯೇ ಯಾವುದೇ ಕೆಲಸವನ್ನಾದರೂ ಗುಂಪಾಗಿ ಮಾಡಿದಲ್ಲಿ ಅದರ ಪರಿಣಾಮ ಸ್ವಲ್ಪ ಜಾಸ್ತಿಯೇ ಆಗಿರುತ್ತದೆ. ಹಾಗೆಯೇ ಯಾವುದೇ ಒಂದು ಅಸಾಧ್ಯವಾದ ಕೆಲಸವನ್ನು ಒಬ್ಬಂಟಿಯಾಗಿ ಮಾಡುವುದಕ್ಕಿಂತಲೂ ಒಂದುಗೂಡಿ ಮಾಡಿದರೆ ಅದು ಯಶಸ್ವಿಯಾಗಿಯೇ ಆಗುತ್ತದೆ.
ನಾನು, ನಾನು ಎನ್ನುವುದಕ್ಕಿಂಥ ನಮ್ಮದು ಎನ್ನುವುದು ಲೇಸು ಒಟ್ಟಾಗಿದ್ದರೆ ಮಾತ್ರ ಬದುಕು ಎನ್ನುವುದು ಇಲ್ಲಿ ಇರುವೆಗಳು ಮನದಟ್ಟು ಮಾಡಿವೆ. ಇರುವೆಗಳ ಸಾಲೊಂದು ಐಸ್ಕ್ರೀಮ್ ಸ್ಟಿಕ್ ಅನ್ನು ಒಗ್ಗಟ್ಟಿನಿಂದ ಹೊತ್ತು ಸಾಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅದೇ ರೀತಿ ನಾವು ಒಗ್ಗಟ್ಟಿನಿಂದ ಇದ್ದರೆ ಎಲ್ಲವು ಸಾಧ್ಯವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದನ್ನು ಮತ್ತೆ ಇರುವೆಗಳು ಸಾಬೀತು ಮಾಡಿವೆ.
PublicNext
24/08/2022 07:31 pm