ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರೂಜಿ ಅವತಾರದಲ್ಲಿ ಮಿಂಚಿದ ಧೋನಿ; ಫೋಟೋ ಸಖತ್ ವೈರಲ್

ರನ್ನಿಂಗ್ ಮಶಿನ್ ಎಂದೇ ಹೆಸರುವಾಸಿಯಾದ ಮಹೇಂದ್ರ ಸಿಂಗ್ ಧೋನಿ ಹೊಸದೊಂದು ಲುಕ್‌ನಲ್ಲಿ ಸಕತ್ ಮಿಂಚಿದ್ದಾರೆ. ಈ ವೈರಲ್ ಆದ ಫೋಟೋದಲ್ಲಿ ಹಳದಿ ಬಣ್ಣದ ಕುರ್ತಾ ಧರಿಸಿ, ಕೈಯಲ್ಲಿ ಜಪಮಾಲೆಯನ್ನು ಹಾಕಿಕೊಂಡು ಗುರೂಜಿ ಅವತಾರದಲ್ಲಿ ಧೋನಿ ಡಿಫ್ರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ತಮ್ಮ ನೆಚ್ಚಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಅಪರೂಪಕ್ಕೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ.

ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಯಾವುದೇ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತೆ, ಇದೀಗ ಅಂತಹದೊಂದು ಫೋಟೋ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ, ಈ ಚಿತ್ರದಲ್ಲಿ, ಧೋನಿ ಗುರೂಜಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ, ಟೀಂ ಇಂಡಿಯಾದ ಲೆಜೆಂಡರಿ ನಾಯಕ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪಂಡಿತ್ ವೇಷದಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೋ ಧೋನಿಯ ಹೊಸ ಜಾಹೀರಾತಿರಬಹುದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Edited By : Abhishek Kamoji
PublicNext

PublicNext

11/08/2022 03:54 pm

Cinque Terre

12.39 K

Cinque Terre

0

ಸಂಬಂಧಿತ ಸುದ್ದಿ