ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಸದ್ಯ ಸನ್ಯಾಸಿಯೊಬ್ಬರು ಯಾವುದೇ ರಕ್ಷಣಾ ಕವಚಗಳನ್ನು ಧರಿಸದೇ ಬೆಟ್ಟ ಏರಿದ ಪರಿ ನೆಟ್ಟಿಗರ ಗಮನಸೆಳೆದಿದೆ.
ಈ ಸನ್ಯಾಸಿ ಪರ್ವತಾರೋಹಣ ಮಾಡುವಾಗ ಯಾವುದೇ ರೀತಿಯ ಸುರಕ್ಷತಾ ಸರಂಜಾಮು ಧರೀಸದಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಈ ವಿಡಿಯೋದ ಶೀರ್ಷಿಕೆಯಲ್ಲಿ ಸುಮ್ಮನೆ ಬೆಟ್ಟ ಹತ್ತಬೇಕು, ಅದಕ್ಕೆ ಏನೂ ಬೇಕಾಗುವುದಿಲ್ಲ ಎಂದು ಬರೆಯಲಾಗಿದೆ. ಈ ವೀಡಿಯೋ ನೋಡಿದ ತುಂಬಾ ಜನ ತರೆಹೆವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕೆಲವು ಬಳಕೆದಾರರು ಯೋಗವೇ ಈ ಫಿಟ್ ನೆಸ್ ಗೆ ಕಾರಣವೆಂದು ಕರೆದರೆ, ಕೆಲವರು ಸನ್ಯಾಸಿಯನ್ನು ಸೂಪರ್ ಹ್ಯೂಮನ್ ಎಂದಿದ್ದಾರೆ.
PublicNext
02/08/2022 08:18 pm