ನಿತ್ಯ ಹತ್ತಾರು ವಿಡಿಯೋಗಳನ್ನು ನೋಡುತ್ತಿರುತ್ತೇವೆ ಅವುಗಳಲ್ಲಿ ಕಲವುಗಳನ್ನು ಮತ್ತೆ ಮತ್ತೆ ನೋಡಬೇಕು ಎನಿಸುವಂತಿರುತ್ತವೆ. ಅಂತಹದಲ್ಲಿ ಇದು ಕೂಡಾ ಒಂದಾಗಿದೆ.
ಪ್ರಾಣಿಗಳ ಜೀವನ ಶೈಲಿಯೇ ಸುಂದರ. ಸದ್ಯ ಕಾಂಗರೂಗಳ ಬಲದ ಬಗ್ಗೆ ನೀವು ಕೇಳಿರಬಹುದು. ತನ್ನ ಶಕ್ತಿಶಾಲಿ ತೋಳುಗಳಿಂದ ಕಾಂಗರೂಗಳು ಮನುಷ್ಯರನ್ನೂ ಬೀಳಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದಕ್ಕೆ ಸಾಕ್ಷಿ ಈ ವಿಡಿಯೋ.
ಕಾಂಗರೂಗಳು ಪರಸ್ಪರ ಕಾದಾಟಕ್ಕೆ ನಿಂತರೆ ಹೇಗಿರುತ್ತದೆ...? ಸದ್ಯ ಅಂತಹದ್ದೊಂದು ದೃಶ್ಯ ವೈರಲ್ ಆಗುತ್ತಿದೆ. ಪರಸ್ಪರ ಸಮರ ಕಲೆ ಪ್ರದರ್ಶನದಲ್ಲಿ ತೊಡಗಿರುವಂತೆ ಕಾಂಗರೂಗಳು ಇಲ್ಲಿ ಕಾದಾಟದ ನಡೆಸಿವೆ.
ಇದು ಟೆಕ್ಸಾಸ್ ನ ಸ್ಯಾನ್ ಆಂಟೋನಿಯೋ ಮೃಗಾಲಯದಲ್ಲಿ ಸೆರೆಯಾದ ದೃಶ್ಯವಾಗಿದೆ. ಮೃಗಾಲಯದ ಅಧ್ಯಕ್ಷ ಮತ್ತು ಸಿಇಒ ಟಿಮ್ ಮೊರೊ ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
21/06/2022 02:53 pm