ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಕ್ಕಿನ ಬೆದರಿಕೆಗೆ ಬೆಚ್ಚಿ ಬಿದ್ದ ನಾಯಿಗಳು : ವಿಡಿಯೋ ವೈರಲ್

ಧೈರ್ಯವೆಂಬ ಅಸ್ತ್ರವೊಂದಿದ್ದರೆ ಎಂಥಹದ್ದೇ ಪರಿಸ್ಥಿತಿಯನ್ನು ನಿಭಾಯಿಸಬಹುದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕೊಂದು ನಾಯಿಯ ಗುಂಪೊಂದನ್ನು ಚದುರಿಸಿದ ಪರಿ ನಿಜಕ್ಕೂ ರೋಚಕವಾಗಿದೆ.

ಬೆಕ್ಕು ಮತ್ತು ಶ್ವಾನಗಳ ನಡುವೆ ಆಗಾಗ ಕಾದಾಟ ನಡೆಯುವುದು ಹೊಸದೇನೂ ಅಲ್ಲ. ಇಂತಹ ಸಂದರ್ಭದಲ್ಲಿ ತನ್ನೆದುರು ಗಾತ್ರದಲ್ಲಿ ದೊಡ್ಡ ಪ್ರಾಣಿ ಇದ್ದರೂ ಬೆಕ್ಕು ಧೃತಿಗೆಡುವುದಿಲ್ಲ.

ಬದಲಾಗಿ, ಪರಿಸ್ಥಿತಿಯನ್ನು ಎದುರಿಸುತ್ತದೆ. ಒಂದು ಶ್ವಾನ ಇದ್ದಾಗಲೂ ಇಂತಹ ಧೈರ್ಯ ತೋರಿಸದ ಬೆಕ್ಕು ಗುಂಪಾಗಿ ಶ್ವಾನಗಳು ಬಂದು ತನ್ನೆದುರು ಬೊಗಳುತ್ತಿದ್ದರೂ ಭಯದಲ್ಲಿ ಓಡದ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ.

Edited By : Somashekar
PublicNext

PublicNext

08/06/2022 05:02 pm

Cinque Terre

41.46 K

Cinque Terre

1

ಸಂಬಂಧಿತ ಸುದ್ದಿ