ಬಿಹಾರ : ಸರ್ಕಾರಿ ಬಿಪಿಎಸ್‌ಸಿ ಶಿಕ್ಷಕನನ್ನು ಅಪಹರಿಸಿ, ಹಲ್ಲೆ ನಡೆಸಿ, ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಪ್ರಸಂಗವೊಂದು ಕಂಡುಬಂದಿದೆ.
ಹೌದು.. ಇಂತಹದೊಂದು ಘಟನೆ ಬಿಹಾರದ ಬೆಗುಸರಾಯ್‌ನ ಕತಿಹಾರ್‌ನಲ್ಲಿ ನಡೆದಿದೆ. ಹುಡುಗಿಯೊಂದಿಗೆ (ಪಕದ್ವಾ ವಿವಾಹ) ಬಲವಂತವಾಗಿ ಮದುವೆ ಮಾಡಿಸಲಾಗಿದ್ದು, ಈ ವೇಳೆ ವರ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವ್ನಿಶ್ ಕುಮಾರ್ ಎಂಬ ಈ ಶಿಕ್ಷಕ ಶಾಲೆಗೆ ಹೋಗುತ್ತಿದ್ದಾಗ ಸ್ಕಾರ್ಪಿಯೋದಲ್ಲಿ ಬಂದ ಜನರು ಬಂದೂಕು ತೋರಿಸಿ ಆತನನ್ನು ಅಪಹರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಲಖಿಸರಾಯ್ ಜಿಲ್ಲೆಯ ಯುವತಿ ಗುಂಜನ್ ಮತ್ತು ಅವ್ನಿಶ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ರು, ಆದರೆ ಮದುವೆಯಾಗಿರಲಿಲ್ಲ. ಆಗಾಗ್ಗೆ ಹೋಟೆಲ್ ಹಾಗೂ ಅವನೀಶ್‌ನ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಅವ್ನಿಶ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ಆದರೆ ಈ ವಿಷಯವನ್ನು ಗುಂಜನ್ ತನ್ನ ಕುಟುಂಬಕ್ಕೆ ತಿಳಿಸಿದ ನಂತರ ಅವನು ಮದುವೆಗೆ ತಿರಸ್ಕರಿಸಿದ್ದ ಎಂದು ಹೇಳಿದ್ದಾಳೆ.
ಹೀಗಾಗಿ ಗುಂಜನ್ ಮನೆಯವರು ಅವ್ನಿಶ್‌ನನ್ನು ಅಪಹರಿಸಿ ತಂದು ಬಲವಂತವಾಗಿ ಮದ್ವೆ ಮಾಡಿಸಿದ್ದಾರೆ. ಬಳಿಕ ಗುಂಜನ್ ತನ್ನ ಕುಟುಂಬದೊಂದಿಗೆ ರಾಜೌರಾದಲ್ಲಿರುವ ಅವ್ನಿಶ್ ಮನೆಗೆ ಹೋದಾಗ ವಿಷಯ ಮತ್ತೊಂದು ತಿರುವು ಪಡೆದಿದೆ. ಅವ್ನಿಶ್ ಕುಟುಂಬ, ಗುಂಜನ್‌ಳನ್ನು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದೆ.
ಈ ಸಂಬಂಧ ಗುಂಜನ್ ಮತ್ತು ಅವ್ನೀಶ್ ಈಗ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ.
PublicNext
15/12/2024 04:26 pm