ಬೆಂಗಳೂರು: ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 34ರ ಹರೆಯದ ಅತುಲ್ ಸುಭಾಷ್ ಸಾವು ಇಡೀ ವಿಶ್ವದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಕೆಲ ಪತ್ನಿಯರ ಕ್ರೌರ್ಯದ ಬಗ್ಗೆಯೂ ಭಾರಿ ಚರ್ಚೆ ಶುರುವಾಗಿದೆ. ಈ ಮಧ್ಯೆ 498A ಸಲಹೆಗಾರ ಶೋನಿ ಕಪೂರ್ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಅತುಲ್ ಸುಭಾಷ್ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯೊಬ್ಬರು ಅತ್ತೆ ಹಾಗೂ ಗಂಡನ ಮೇಲೆ ಹಲ್ಲೆ ನಡೆಸಿದ ವಿಡಿಯೋವನ್ನು ಶೋನಿ ಕಪೂರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಇದು ಇಂದಿನ ಭಾರತೀಯ ಮನೆಯಲ್ಲಿ ಬಹಳ ಸಾಮಾನ್ಯವಾದ ಸನ್ನಿವೇಶವಾಗಿದೆ. ಗಂಡ ಮತ್ತು ವಯಸ್ಸಾದ ಅತ್ತೆಯನ್ನು ಹೊಡೆಯುವ ಈ ಕ್ರೂರ ಹೆಂಡತಿಯರಿಗೆ ಯಾವುದೇ ಕಾನೂನು ಇಲ್ಲ. ಮಹಿಳೆಯರೂ ಕೌಟುಂಬಿಕ ದೌರ್ಜನ್ಯ ಮಾಡುತ್ತಾರೆ. ನ್ಯಾಯಾಂಗವು ಮತ್ತೊಂದು ಅತುಲ್ ಸುಭಾಷ್ ಆತ್ಮಹತ್ಯೆಗಾಗಿ ಕಾಯುತ್ತಿದೆಯೇ?' ಎಂದು ಶೋನಿ ಕಪೂರ್ ಪ್ರಶ್ನಿಸಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ಬೇರೆ ಮನೆ ಹಾಗೂ ಸ್ವತಂತ್ರ ಜೀವನಕ್ಕಾಗಿ ಮಹಿಳೆ ಹೀಗೆ ಕ್ರೌರ್ಯ ಮೆರೆಯುತ್ತಿದ್ದಾಳೆ. ಇಂಥವರಿಗೆ ಕಠಿಣ ಶಿಕ್ಷೆ ಆಗಬೇಕು' ಎಂದು ಆಗ್ರಹಿಸಿದ್ದಾರೆ.
PublicNext
13/12/2024 09:22 am