ಬೆಂಗಳೂರು: ಪತ್ನಿ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದ ಕುರಿತು ಒಂದೊಂದೇ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಅತುಲ್ ಸುಭಾಷ್ ಸಾವಿಗೆ ಶರಣಾಗುವ ಮುನ್ನ ಮಾಡಿದ ವಿಡಿಯೋ ಹೇಳಿಕೆಯಲ್ಲಿ ಪತ್ನಿ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ.
ತಂದೆಯ ಆರೋಗ್ಯ ಸರಿ ಇಲ್ಲದ ಕಾರಣ ನಾನು ಬೇಗ ಮದುವೆ ಆಗಬೇಕಾದ ಅನಿವಾರ್ಯತೆ ಬಂತು. ಪತ್ನಿ ನಿಖಿತಾ ಸಿಂಘಾನಿಯಾ ಎಲ್ಲದರಲ್ಲೂ ತನ್ನ ಇಚ್ಛೆಯಂತೆಯೇ ನಡೆದುಕೊಳ್ಳುತ್ತಿದ್ದಳು. ನಾಲ್ಕೈದು ದಿನಗಳ ಕಾಲ ಸ್ನಾನ ಮಾಡುತ್ತಿರಲಿಲ್ಲ. ಸ್ನಾನ ಮಾಡದಿರುವಾಗಲು ಆಕೆ ತನ್ನೊಂದಿಗೆ ಸೆಕ್ಸ್ ಮಾಡಬೇಕೆಂದು ನಿರೀಕ್ಷಿಸುತ್ತಿದ್ದಳು. ಮಗುವಿಗೆ ಹಾಲುಣಿಸುವಾಗಲೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಕಳೆದ ಆರು ತಿಂಗಳಲ್ಲಿ ನನ್ನ ಹಾಗೂ ನನ್ನ ಪತ್ನಿ ನಡುವೆ ಲೈಂಗಿಕ ಕ್ರಿಯೆ ನಡೆದಿಲ್ಲ ಎಂದು ಅತುಲ್ ಸುಭಾಷ್ ತಮ್ಮ ವಿಡಿಯೋ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
PublicNext
13/12/2024 06:21 pm