ಈಗೊಂದು ವೀಡಿಯೋ ವೈರಲ್ ಆಗಿದೆ. ಇಲ್ಲಿ ಸಿನಿಮಾ ಡ್ಯಾನ್ಸ್ ಇಲ್ಲ. ನಾಗಿಣಿ ಡ್ಯಾನ್ಸ್ ಅಂತೂ ಇದು ಅಲ್ಲವೇ ಅಲ್ಲ. ಆದರೆ, ಇದನ್ನ ಕಂಡ್ರೆ ನಿಮಗೆ ಕಂಡಿತಾ ದೇಶ ಭಕ್ತಿ ಒಮ್ಮೆ ಮನದಲ್ಲಿ ಮೂಡುತ್ತದೆ.
ಹೌದು. ಈ ಒಂದು ವೀಡಿಯೋ ಅದೇ ಸತ್ಯವನ್ನೇ ಹೇಳುತ್ತಿದೆ. ಆರ್ಮಿ ಜವಾನ್ ಟ್ರೈನಿಂಗ್ ಮುಗಿಸಿ ಬಂದಿದ್ದಾನೆ. ಅದೇ ಹ್ಯಾಂಗೋವರ್ ನಲ್ಲಿಯೇ ಇದ್ದನೋ ಏನೋ ಗೊತ್ತಿಲ್ಲ. ಗೆಳೆಯನ ಮದುವೆಲ್ಲಿ ತಮಟೆ ಜೊತೆಗೆ ಆರ್ಮಿ ಡ್ರಿಲ್ ಮಾಡಿ ಬಿಟ್ಟಿದ್ದಾನೆ.
ಈಗ ಇದೇ ಆರ್ಮಿ ಡ್ಯಾನ್ಸ್ ಆಗಿದೆ. ನೋಡುಗರ ಮತ್ತು ನೆಟ್ಟಿಗರ ಮನವನ್ನೂ ಸೆಳೆಯುತ್ತಿದೆ. ಅಂದ್ಹಾಗೆ ಈ ವೀಡಿಯೋವನ್ನ ಐಪಿಎಸ್ ಅಧಿಕಾರಿ ದಿಮಾಂಶು ಕಾಬ್ರಾ ತಮ್ಮ ತಮ್ಮ ಟ್ವಿಟರ್ ನಲ್ಲೂ ಹಂಚಿಕೊಂಡಿದ್ದಾರೆ. ಆರ್ಮಿ ಟ್ರೈನಿಂಗ್ ಮುಗಿದ ಬಳಿಕವೇ ಜವಾನ್ ನೇರವಾಗಿ ಗೆಳೆಯನ ಮದುವೆಗೆ ಬಂದು ಬಿಟ್ಟಿದ್ದಾನೆ ಅಂತಲೂ ಬರೆದುಕೊಂಡಿದ್ದಾರೆ.
PublicNext
23/04/2022 04:44 pm