ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಕೋಮು ಗಲಭೆಗಳು,ಗದ್ದಲ,ಗಲಾಟೆಗಳು ನಡೆಯುತ್ತಿದೆ. ಇದರ ಮಧ್ಯೆ ಮನೆವೊಂದರ ಗೇಟ್ ಗೆ ಹಾಕಿದ ಬೋರ್ಡ್ ವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಅಷ್ಟಕ್ಕೂ ಆ ಬೋರ್ಡ್ ನಲ್ಲಿ ಬರೆದ ಹೀಗೆ ನೋಡಿ
‘ಅನಿವಾರ್ಯ ಎನಿಸಿದಾಗ ಶರೀರದ ಅಂಗಾಂಗಳನ್ನು ಮಾರಿಕೊಂಡು ಜೀವನ ಮಾಡಬಹುದು. ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ ಖಾಲಿಯಿದೆ, ಹಿಂದೂಗಳಿಗೆ ಮಾತ್ರ’ ಎಂದು ದಯಾನಂದ ಎನ್ನುವವರು ಫಲಕ ಹಾಕಿ, ಅದರ ಕೆಳಗೆ ತಮ್ಮ ನಂಬರ್ ಸಹ ಬರೆದಿದ್ದಾರೆ.
ಹೇಟ್ ವಾಚ್ ಕರ್ನಾಟಕ ಟ್ವಿಟರ್ ಅಕೌಂಟ್ ಈ ಚಿತ್ರವನ್ನು ಟ್ವೀಟ್ ಮಾಡಿದೆ. ಇದನ್ನು ರಿಟ್ವೀಟ್ ಮಾಡಿರುವ ಅಶೋಕ್ ಸ್ವೇನ್ ಎನ್ನುವವರು ‘ಭಾರತದ ಸಿಲಿಕಾನ್ ವ್ಯಾಲಿ ಎನ್ನಲಾಗುವ ಬೆಂಗಳೂರು’ ಎಂದು ವಿಷಾದದ ದನಿಯ ಒಕ್ಕಣೆ ಬರೆದಿದ್ದಾರೆ.
‘ಹೇಟ್ ವಾಚ್ ಕರ್ನಾಟಕ’ ಹಂಚಿಕೊಂಡಿರುವ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಹಲವರು, ‘ದೇವರು ಅವರ ಕೋರಿಕೆ ಒಪ್ಪಿಕೊಳ್ಳಲಿ’ (ಅಂಗಾಂಗ ಮಾರಿಕೊಳ್ಳುವ ಸ್ಥಿತಿ ಬರಲಿ) ಎಂದು ಹಾರೈಸಿದ್ದಾರೆ. ರಾಜನ್ ಎನ್ನುವವರಂತೂ, ‘ಎಂಥ ಬುದ್ಧಿವಂತ ಮನುಷ್ಯ. ಒಂದು ವೇಳೆ ಈ ಮನುಷ್ಯನ ಆರೋಗ್ಯ ಹಾಳಾದರೆ ವೈದ್ಯರು ಇವನಿಗೆ ಕೊಡುವ ರಕ್ತ ಮತ್ತು ಅಂಗಾಂಗಳು ಸಂಪೂರ್ಣ ಹಿಂದೂ ಧರ್ಮಕ್ಕೆ ಸೇರಿದವನದ್ದೇ ಆಗಿವೆ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
PublicNext
22/04/2022 07:57 pm