ಮನುಷ್ಯ ಸ್ನೇಹಿ ಪ್ರಾಣಿಗಳು ಮನುಷ್ಯರನ್ನು ಒಮ್ಮೆ ಹಚ್ಚಿಕೊಂಡರೆ ಮುಗೀತು. ಸದಾ ಬೆನ್ನು ಬೀಳುತ್ತವೆ. ಹತ್ತಿರ ಬಂದು ಮೈ ಉಜ್ಜುತ್ತವೆ. ತುಂಟತನ ತೋರುತ್ತವೆ. ನಿಷ್ಕಲ್ಮಶ ಪ್ರೀತಿಯನ್ನೇ ಧಾರೆ ಎರೆಯುತ್ತವೆ.
ಈ ಮಾತಿಗೆ ಬೆಸ್ಟ್ ಉದಾಹರಣೆ ಎಂಬಂತೆ ಒಂದು ವಿಡಿಯೋ ಇಲ್ಲಿದೆ. ತನ್ನನ್ನು ಸಾಕಿದ ಮಾಲೀಕ ಮುಂದೆ ಮುಂದೆ ಓಡ್ತಿದ್ದಾನೆ. ಮಾಲೀಕನನ್ನು ಬೆನ್ನಟ್ಟಿದ ಮರಿಗಜ ಹಿಂದೆಯಿಂದ ಓಡಿ ಬರುತ್ತಿದೆ. ಓಡಿ ಬಂದು ತನ್ನ ಮಾಲೀಕನನ್ನು ಸುತ್ತುವರೆದಿದೆ. ಈ ಮುದ್ದಾದ ವಿಡಿಯೋ ವೈರಲ್ ಆಗಿ ಪ್ರಕೃತಿ ಪ್ರಿಯರ ಮನಸು ಗೆದ್ದಿದೆ.
PublicNext
12/01/2022 06:48 pm