ಕೆಲವೊಂದು ಸಂದರ್ಭಗಳಲ್ಲಿ ಅನ್ಯೂನ್ಯತೆ ಎನ್ನುವುದನ್ನು ಪ್ರಾಣಿಗಳನ್ನು ನೋಡಿ ಕಲಿಯಬೇಕಾಗುತ್ತದೆ. ಮುದ್ದು ಪ್ರಾಣಿಗಳ ಸ್ನೇಹದ ದೃಶ್ಯಗಳನ್ನು ನೋಡುವ ಖುಷಿಯೇ ಬೇರೆ. ಈ ನಿರ್ಮಲ ಪ್ರೀತಿ ನಮ್ಮ ಮನಸ್ಸಿನ ಉಲ್ಲಾಸವನ್ನೂ ಇಮ್ಮಡಿಯಾಗಿಸುತ್ತದೆ.
ನಮ್ಮಲ್ಲೊಂದು ಮುಗುಳ್ನಗೆ ಮೂಡಿಸುತ್ತದೆ. ಈ ರೀತಿಯ ಗೆಳೆತನದ ದೃಶ್ಯಗಳನ್ನು ಎಷ್ಟು ನೋಡಿದರೂ ಖಂಡಿತಾ ಮನಸ್ಸು ತಣಿಯದು.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಮುದ್ದು ಶ್ವಾನ ಮತ್ತು ಹಸುವಿನ ನಡುವಣ ಸುಂದರ ಗೆಳೆತನದ ಅಪೂರ್ವ ದೃಶ್ಯ ಕಾಣಬಹುದು.
@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
PublicNext
06/01/2022 11:05 pm