ಹಾವುಗಳು ನೆಲದ ಮೇಲೆ ಸರ ಸರನೇ ಸರಿದು ಹೋಗುತ್ತವೆ. ಇಲ್ಲವೇ ನೀರಲ್ಲೂ ಅಷ್ಟೇ ಸಲೀಸಾಗಿಯೇ ಈಜಿ ದಾಟಿ ಬಿಡುತ್ತವೆ. ಆದರೆ ಇಲ್ಲೊಂದು ಹಾವು ವಿಶೇಷ ಪ್ರಯೋಗ ಮಾಡಿದಂತಿದೆ. ಮನುಷ್ಯರು ಅಷ್ಟು ವೇಗವಾಗಿ ಅಡಿಕೆ ಮರ ಏರ್ತಾರೋ ಇಲ್ವೋ.ಆದರೆ ಈ ಕಪ್ಪು ಬಣ್ಣದ ಕೋಬ್ರಾ ಅಡಿಕೆ ಮರವನ್ನ ಸುರುಳಿ, ಸುರುಳಿಯಾಗಿ ಸುತ್ತಿಕೊಂಡು ಮೇಲೆ,ಮೇಲೆ ಏರಿದೆ.
ಇದು ನಿಜಕ್ಕೂ ವಿಶೇಷವೇ ಸರಿ. ಹಾವುಗಳು ಈ ತರ ಮರ ಏರೋದು ಅತಿ ವಿರಳ. ಜನ ಕೂಡ ಹೀಗೆ ನೋಡಿರೋದು ಕಡಿಮೇನೆ. ಆದರೆ ಈ ವಿಶೇಷ ದೃಶ್ಯ ಈಗ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ.
ಡಾಕ್ಟರ್ ದುರ್ಗಾ ಪ್ರಸಾದ್ ಈ ವೀಡಿಯೋವನ್ನ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ ಗಳೂ ಬಂದಿವೆ. ಯಾವ ಹಾವು ಇದು ಅಂತಲೂ ಕಾಮೆಂಟ್ ನಲ್ಲಿ ಕೇಳಲಾಗಿದೆ. ಮೇಲೇರಿದ ಈ ಹಾವು ಕೆಳಗೆ ಹೇಗೆ ಇಳಿಯುತ್ತದೆ ಅಂತಲೂ ಇಲ್ಲಿ ಪ್ರಶ್ನೆ ಇದೆ. ಊಟ ಕರಗಿಸಲು ಹೀಗೆ ಹಾವು ಮರವೇರಿದೆ ಅಂತಲೂ ಕಾಮೆಂಟ್ ನಲ್ಲಿ ಕೆಲವ್ರು ಕಾಮಿಡಿ ಮಾಡಿದ್ದಾರೆ. ಒಟ್ಟಾರೆ ಈ ಹಾವು ಅಡಿಕೆ ಮರವೇರಿ ಆಶ್ಚರ್ಯ ಮೂಡಿಸಿದೆ.
PublicNext
01/01/2022 02:04 pm