ಪ್ಯಾಂಟ್ ಹೇಗೆ ಬೇಕೋ ಹಾಗೆ ಧರಿಸಬಹುದು. ಶಾರ್ಟ್ ಪ್ಯಾಂಟ್ ಧರಿಸೋದು ಕೂಡ ಈಗ ಸ್ಟೈಲ್ ಆಗಿದೆ. ಆದರೆ ಇಲ್ಲೊಬ್ಬ ಯುವಕ ಪಲ್ಟಿ ಹೊಡೆದು ಶಾರ್ಟ್ ಧರಿಸ್ತಾನೆ. ಇದು ಸಾಹಸದ ಕೆಲಸವೇ ಬಿಡಿ. ಅದಕ್ಕೇನೆ ಜನರು ಈ ವೀಡಿಯೋವನ್ನ ಸಿಕ್ಕಾಪಟ್ಟೆ ನೋಡ್ತಾಯಿದ್ದಾರೆ. ಬನ್ನಿ, ನೋಡೋಣ.
ಇಬ್ಬರು ಯುವಕರು ಈ ಒಂದು ಪಿಂಕ್ ಶಾರ್ಟ್ಸ್ ಅನ್ನ ಒಬ್ಬ ಆಕಡೆಗೆ ಇನ್ನೊಬ್ಬ ಈಕಡೆಗೆ ಹಿಡಿದುಕೊಂಡಿದ್ದಾರೆ. ಆಗ ಮತ್ತೊಬ್ಬ ಸಾಹಸಿ ಯುವಕ ಪಲ್ಟಿ ಹೊಡೆದು ಈ ಹಾಫ್ ಪ್ಯಾಂಟ್ ಧರಿಸುತ್ತಾನೆ. ಇದೇ ನೋಡಿ ಈ ವಿಶೇಷ ವೀಡಿಯೋದ ಸತ್ಯ.
ಆದರೆ ಈ ಥರ ಈಗಾಗಲೇ ಬೇಜಾನ್ ವೀಡಿಯೋಗಳು ವಿದೇಶದ ಯುವಕರು-ಯುವತಿಯರು ಮಾಡಿದ್ದಾರೆ. ವೈರಲ್ ಕೂಡ ಆಗಿದ್ದಾರೆ. ಈಗ ನಮ್ಮ ಈ ಯುವಕನ ಸರದಿ.
ಹಾಗಂತ ಇದು ಅಷ್ಟು ಸುಲಭವ ಕೂಡ ಅಲ್ಲವೇ ಅಲ್ಲ ಬಿಡಿ. ಇದನ್ನ ಮಾಡೋಕೆ ಧೈರ್ಯ ಬೇಕು. ಅಂದ್ಹಾಗೆ ಈ ವೀಡಿಯೋಗೆ 14 ಲಕ್ಷ ಲೈಕ್ಸ್ ಬಂದಿದೆ. ಮೊನ್ನೆ ಡಿಸೆಂಬರ್-16 ರಂದು ಈ ವೀಡಿಯೋ ಶೇರ್ ಆಗಿದೆ. ವೈರಲ್ ಕೂಡ ಆಗುತ್ತಲೇ ಇದೆ.
PublicNext
30/12/2021 07:09 pm