ಎಲ್ಲೆಡೆ ಕ್ರಿಸ್ ಮಸ್ ಹಬ್ಬದ ಸಡಗರ ಕಾಣುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಕ್ರಿಸ್ ಮಸ್ ಈವ್ ಆರಂಭವಾಗಿದೆ.ಕ್ರಿಶ್ಚಿಯನ್ನರ ಸಮುದಾಯದ ಪ್ರಮುಖ ಮತ್ತು ವಿಶೇಷವಾದ ವರ್ಷದ ಏಕೈಕ ಹಬ್ಬ ಇದಾಗಿದೆ.
ಸದ್ಯ ಸಾಂತಾ ಕ್ಲಾಸ್ ಪರಿಕಲ್ಪನೆ ಎಲ್ಲರಿಗೂ ತಿಳಿದಿದೆ. ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎನ್ನುವ ಖುಷಿ ಮಕ್ಕಳಲ್ಲಿರುತ್ತದೆ.
ಯುನೈಟೆಡ್ ಪಾರ್ಸಲ್ ಸರ್ವಿಸ್ ಎನ್ನುವ ಅಂತಾರಾಷ್ಟ್ರೀಯ ಕಂಪನಿಯೊಂದು ವಿಕಲಚೇತನಬಾಲಕನಿಗಾಗಿ ಗಾಡಿಯಲ್ಲಿ ಉಡುಗೊರೆಯನ್ನು ಕಳುಹಿಸಿದೆ. ಅದರಲ್ಲಿರುವ ವ್ಯಕ್ತಿ ಸಾಂತಾ ಕ್ಲಾಸ್ ನಂತೆಯೇ ಡ್ರೆಸ್ ಧರಿಸಿದ್ದರು.
ಇದರಿಂದ ಖುಷಿಗೊಂಡ ಬಾಲಕ ಸಾಂತಾ ಕ್ಲಾಸ್ ಕ್ರಿಸ್ ಮಸ್ ಈವ್ ಗೆ ಉಡುಗೊರೆ ತಂದಿದ್ದಾರೆ ಎಂದು ಕುಣಿದು ಕುಪ್ಪಳಿಸಿದ್ದಾನೆ. ಸದ್ಯ ಈ ವಿಡಿಯೋವನ್ನು ನೆಕ್ಸ್ಟ್ ಡೋರ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
24/12/2021 07:21 pm